ಕೊರೋನ ವೈರಸ್ ಪ್ರಕರಣ:ಗುಜರಾತ್‌ನ್ನು ಹಿಂದಿಕ್ಕಿದ ಕರ್ನಾಟಕ

Update: 2020-07-15 06:44 GMT

ಹೊಸದಿಲ್ಲಿ, ಜು.15: ದೇಶದಲ್ಲಿ ನಾಲ್ಕನೇ ಗರಿಷ್ಟ ಕೊರೋನ ವೈರಸ್ ಸೋಂಕಿತ ಪ್ರಕರಣ ಹೊಂದಿರುವ ರಾಜ್ಯವಾಗಿರುವ ಕರ್ನಾಟಕ ಮಂಗಳವಾರ ಗುಜರಾತ್ ರಾಜ್ಯವನ್ನು ಹಿಂದಿಕ್ಕಿದೆ.

ರಾಜ್ಯದಲ್ಲಿ ಮಂಗಳವಾರ ಹೊಸತಾಗಿ 2,500ಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದ್ದು, ಈಮೂಲಕ ಒಟ್ಟು ಸೋಂಕಿತರ ಸಂಖ್ಯೆ 44,000 ಗಡಿ ದಾಟಿದೆ.

ಕರ್ನಾಟಕ ಇದೀಗ ದೇಶದಲ್ಲಿ ಅತ್ಯಂತ ವೇಗವಾಗಿ ಸೋಂಕಿತಪೀಡಿತವಾಗುತ್ತಿರುವ ರಾಜ್ಯವಾಗಿದೆ. ಕೊರೋನ ವೈರಸ್ ಸಂಖ್ಯೆಗಳು ಅತ್ಯಂತ ವೇಗವಾಗಿ ಏರುತ್ತಿವೆ. ಈ ತಿಂಗಳ ಎರಡು ವಾರಗಳಲ್ಲಿ ರಾಜ್ಯದಲ್ಲಿ ಸುಮಾರು 29,000 ಹೊಸ ಪ್ರಕರಣಗಳು ಪತ್ತೆಯಾಗಿವೆ. ಪ್ರತಿ ದಿನ ಸರಾಸರಿ 2,000ಕ್ಕೂ ಅಧಿಕ ಜನರು ಸೋಂಕಿತರಾಗುತ್ತಿದ್ದಾರೆ. ಕೆಲವೇ ವಾರದ ಹಿಂದೆ ಪ್ರತಿ ದಿನ 350ರಿಂದ 450 ಪ್ರಕರಣಗಳು ಪತ್ತೆಯಾಗುತ್ತಿದ್ದವು.

ಈಗಾಗಲೇ ಸೋಂಕಿತ ವ್ಯಕ್ತಿಗಳ ಪ್ರಾಥಮಿಕ ಹಾಗೂ ಎರಡನೇ ಸಂಪರ್ಕ ವ್ಯಕ್ತಿಗಳ ಪತ್ತೆ ಕಾರ್ಯದತ್ತ ಹೆಚ್ಚು ಗಮನ ಹರಿಸಿ ಪರೀಕ್ಷೆ ಮಾಡುತ್ತಿರುವ ಕಾರಣ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗುತ್ತಿದೆ ಎಂದು ರಾಜ್ಯಸರಕಾರ ಹೇಳಿದೆ. ಈ ಅವಧಿಯಲ್ಲಿ ರಾಜ್ಯ ಸರಕಾರ ಪರೀಕ್ಷಾ ಸಂಖ್ಯೆಯನ್ನು ಹೆಚ್ಚಿಸಿದೆ. ಕರ್ನಾಟಕ ಪ್ರತಿದಿನ 12,000ದಿಂದ 14,000 ಸ್ಯಾಂಪಲ್‌ಗಳ ಪರೀಕ್ಷೆ ನಡೆಸುತ್ತಿದೆ. ಮಂಗಳವಾರ ಒಂದೇ ದಿನ 23,000 ಪರೀಕ್ಷೆಗಳನ್ನು ನಡೆಸಲಾಗಿದೆ. ಪರೀಕ್ಷೆಗಳ ಹೆಚ್ಚಳ ಹಾಗೂ ಸಂಪರ್ಕಿತರ ಪತ್ತೆ ಕಾರ್ಯದಿಂದ ಸೋಂಕಿತ ವ್ಯಕ್ತಿಯನ್ನು ಬೇಗನೆ ಪತ್ತೆ ಹಚ್ಚಲು ಸಾಧ್ಯವಿದೆ. ಇಂತಹವರನ್ನು ಕ್ವಾರಂಟೈನ್‌ನಲ್ಲಿಡುವುದರಿಂದ ಸಮುದಾಯಕ್ಕೆ ಹರಡುವುದನ್ನು ತಡೆಗಟ್ಟಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News