‘ದೇವರೇ ನಮ್ಮನ್ನು ಕಾಪಾಡಬೇಕು’: ಹೆಚ್ಚುತ್ತಿರುವ ಕೊರೋನ ಪ್ರಕರಣಗಳ ಕುರಿತು ಶ್ರೀರಾಮುಲು

Update: 2020-07-16 06:19 GMT

ಬೆಂಗಳೂರು: ಕೊರೋನ ವೈರಸ್ ಸೋಂಕಿನಿಂದ ಕರ್ನಾಟಕವನ್ನು ದೇವರೇ ಕಾಪಾಡಬೇಕು ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ ಎಂದು timesofindia ವರದಿ ಮಾಡಿದೆ.

ಕರ್ನಾಟಕದಲ್ಲಿ ಕೋವಿಡ್ 19 ಪರಿಸ್ಥಿತಿಯ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, “ದೇವರು ಮಾತ್ರ ನಮ್ಮನ್ನು ಕಾಪಾಡಬಲ್ಲರು. ನಮ್ಮ ಬಗ್ಗೆ ನಾವೇ ಎಚ್ಚರ ವಹಿಸಬೇಕು” ಎಂದರು.

“ವಿಶ್ವಾದ್ಯಂತ ಪ್ರಕರಣಗಳ ಸಂಖ್ಯೆ ಇಮ್ಮಡಿಗೊಳ್ಳುತ್ತಿದೆ. ಅದು ಬಡವ, ಶ್ರೀಮಂತ, ಸಮುದಾಯ, ಧರ್ಮ ಎಂದು ಆಯ್ಕೆ ಮಾಡಿಕೊಳ್ಳುವುದಿಲ್ಲ. ಅಲ್ಲಿ ಯಾವುದೇ ಜಾತಿ-ವರ್ಗದ ಬೇಧವಿಲ್ಲ. ಪ್ರಕರಣಗಳು ಖಂಡಿತ ಹೆಚ್ಚಾಗುತ್ತದೆ. ದೇವರೇ ನಮ್ಮನ್ನು ಕಾಪಾಡಬೇಕು” ಎಂದವರು ಹೇಳಿದರು.

'ದೇವರ ಕೃಪೆಯೂ ನಮ್ಮೆಲ್ಲರ ಮೇಲಿರಬೇಕು' ಎಂಬ ಮಾತನ್ನು ಸಾಮಾನ್ಯ ಅರ್ಥದಲ್ಲಿ ಹೇಳಿದ್ದೇನೆಯೇ ಹೊರತು, ಹತಾಶೆಯಿಂದಲ್ಲ. 'ದೇವರು ದೊಡ್ಡವನು, ನಮ್ಮೆಲ್ಲ ಪ್ರಯತ್ನಗಳಿಗೆ ಅವನ ಕೃಪೆಯೂ ಇರಬೇಕು' ಎಂಬ ಮಾತಿಗೆ ನಾನು ಈಗಲೂ ಬದ್ಧನಾಗಿದ್ದೇನೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದ ನಮ್ಮ ಸರ್ಕಾರ ಕೋವಿಡ್ ಸೋಂಕು ಹರಡುವುದನ್ನು ನಿಯಂತ್ರಿಸಲು ಮತ್ತು ಸೋಂಕಿತರ ಚಿಕಿತ್ಸೆಗೆ ಎಲ್ಲ ಅತ್ಯಗತ್ಯ ಕ್ರಮಗಳನ್ನು ಕೈಗೊಂಡಿದೆ. ಮುಖ್ಯಮಂತ್ರಿಗಳ ಜತೆ ನಾವೆಲ್ಲರೂ ಹಗಲಿರುಳೂ ಕೆಲಸ ಮಾಡುತ್ತಿದ್ದೇವೆ. 

-ಶ್ರೀರಾಮುಲು, ಸಚಿವ (ಟ್ವೀಟ್)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News