ಉತ್ತರ ಪ್ರದೇಶದ ಸಿಎಂ ಕಚೇರಿಯೆದುರು ಆತ್ಮಾಹುತಿ ಯತ್ನ ನಡೆಸಿದ್ದ ಮಹಿಳೆ ಸಾವು

Update: 2020-07-22 12:28 GMT
ಸಾಂದರ್ಭಿಕ ಚಿತ್ರ

ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಕಚೇರಿಯೆದುರು ಜುಲೈ 17ರಂದು ತನ್ನ ಪುತ್ರಿಯ ಜತೆಗೆ ಆತ್ಮಾಹುತಿಗೆ ಯತ್ನಿಸಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಅಮೇಠಿ ಜಿಲ್ಲೆಯಲ್ಲಿ ಭೂವಿವಾದವೊಂದಕ್ಕೆ ಸಂಬಂಧಿಸಿದಂತೆ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ತಾಯಿ ಮಗಳು ಸಿಎಂ ಕಚೇರಿಯೆದುರು ಆತ್ಮಹತ್ಯೆಗೈಯ್ಯಲು ಯತ್ನಿಸಿದ್ದರು.

ತಕ್ಷಣ ಅವರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಸಫಿಯಾ ಎಂಬ ಹೆಸರಿನ ಮಹಿಳೆ ಮಂಗಳವಾರ ಮೃತಪಟ್ಟಿರುವ ಕುರಿತಂತೆ ಎಸ್‍ಪಿಎಂ ಸಿವಿಲ್ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News