ವೇಶ್ಯಾವಾಟಿಕೆ ದಂಧೆ ಆರೋಪ: ಪ್ರಮುಖ ರೂವಾರಿ 'ಪಿಂಪ್ ಸ್ವಾತಿ' ಸಿಸಿಬಿ ಬಲೆಗೆ

Update: 2020-07-22 13:43 GMT

ಬೆಂಗಳೂರು, ಜು.22: ವೇಶ್ಯಾವಾಟಿಕೆ ದಂಧೆಯ ಪ್ರಮುಖ ರೂವಾರಿಯಾಗಿದ್ದ ಸ್ವಾತಿ ಎಂಬಾಕೆಯನ್ನು ಕರ್ನಾಟಕ ಅಕ್ರಮ ಕಳ್ಳಸಾಗಣೆ ತಡೆಗಟ್ಟುವಿಕೆ ಕಾಯ್ದೆ(ಕೆಪಿಐಟಿ)ಯಡಿ ಸಿಸಿಬಿ ಪೊಲೀಸರು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.

ನಗರದ ಹೊರಮಾವು ಸಮೀಪದ ಬಿಳಿ ಶಿವಾಲೆಯ ಸ್ವಾತಿ ಯಾನೆ ಸರಸ್ವತಿ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯು ಇಲ್ಲಿನ ಕಾಟನ್ ಪೇಟೆ, ಎಚ್‍ಎಸ್‍ಆರ್ ಲೇಔಟ್ ಸೇರಿ ಇನ್ನಿತರ ಕಡೆಗಳಲ್ಲಿ ವಿವಿಧ ಹೆಸರುಗಳಲ್ಲಿ ಮಸಾಜ್ ಪಾರ್ಲರ್ ಸ್ಪಾಗಳನ್ನು ತೆರೆದು ಹೆಚ್ಚಿನ ವೇತನದ ಉದ್ಯೋಗದ ನೆಪದಲ್ಲಿ ಯುವತಿಯರನ್ನು ಅಕ್ರಮ ಕಳ್ಳಸಾಗಣೆ ಮಾಡಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದು, ಹಲವು ಬಾರಿ ಈಕೆಯನ್ನು ಪೊಲೀಸರು ಬಂಧಿಸಿದ್ದರು ಎನ್ನಲಾಗಿದೆ.

ವೇಶ್ಯಾವಾಟಿಕೆಗಾಗಿ ಯುವತಿಯರನ್ನ ಅಕ್ರಮ ಕಳ್ಳಸಾಗಣೆ ಮಾಡುತ್ತಿದ್ದು, ಕಳೆದ 2007ರಿಂದ 13 ವರ್ಷಗಳ ದಂಧೆಯಲ್ಲಿ ತೊಡಗಿದ್ದರು. ಪೊಲೀಸರಿಗೆ ಸವಾಲಾಗಿದ್ದ ಪಿಂಪ್ ಸ್ವಾತಿ ಎಂದೇ ಖ್ಯಾತಿಯಾಗಿದ್ದ ಈಕೆಯನ್ನು ಸಿಸಿಬಿ ಪೊಲೀಸರು ಬಂಧಿಸಿ, ಕೆಪಿಐಟಿ ಕಾಯ್ದೆಯ ಅಡಿ ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News