ಸರಕಾರವನ್ನು ನಂಬುವಂತಿಲ್ಲ, ನಮ್ಮ ಆರೋಗ್ಯ ನಾವೇ ಕಾಪಾಡಿಕೊಳ್ಳಬೇಕು: ಸಂಸದ ಡಿ.ಕೆ.ಸುರೇಶ್

Update: 2020-07-22 15:05 GMT

ಬೆಂಗಳೂರು, ಜು.22: ಕೋವಿಡ್-19 ಸಂಬಂಧ ಜನತೆ ಸರಕಾರವನ್ನು ನಂಬಿಕೊಂಡು ಕೂರುವಂತಿಲ್ಲ. ಬದಲಾಗಿ, ತಮ್ಮ ಆರೋಗ್ಯವನ್ನು ತಾವೇ ಕಾಪಾಡಿಕೊಳ್ಳಬೇಕು ಎಂದು ಸಂಸದ ಡಿ.ಕೆ ಸುರೇಶ್ ಆರೋಪಿಸಿದರು.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರದಲ್ಲಿ ಒಬ್ಬರಿಗೊಬ್ಬರಿಗೆ ಸಮನ್ವಯತೆಯೇ ಇಲ್ಲ. ಈಗ ವೈದ್ಯರನ್ನು ಹುಡುಕುತ್ತಿದ್ದಾರೆ, ಈಗ ಕೋವಿಡ್ ಕೇರ್ ಸೆಂಟರ್ ನಿರ್ಮಾಣ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದರು.

ಮುಖ್ಯಮಂತ್ರಿ ಒಬ್ಬರೇ ಪ್ರಾಮಾಣಿಕರಾಗಿದ್ದರೆ, ಉಳಿದವರು ಪ್ರಾಮಾಣಿಕರಾಗಿ ಇರಬೇಕು ಅಲ್ಲವೇ ಎಂದು ಪ್ರಶ್ನಿಸಿದ ಅವರು, ಸಚಿವರು, ಅಧಿಕಾರಿಗಳೂ ಕೆಲಸ ಮಾಡಬೇಕು. ಇಲ್ಲದಿದ್ದರೆ, ಇದರಿಂದ ನಾವು ಮುಕ್ತಗೊಳ್ಳಲು ಕಷ್ಟಕರವಾಗಲಿದೆ ಎಂದರು.

ಬೆಂಗಳೂರಿನ ಜನ ಅವರ ಆರೋಗ್ಯವನ್ನು ಅವರೇ ಕಾಪಾಡಿಕೊಳ್ಳಬೇಕು. ಸರಕಾರ ನಂಬಿಕೊಂಡರೆ ಆಗುವುದಿಲ್ಲ. ಅಧಿಕಾರಿಗಳು ಹೇಳುವ ಪರಿಸ್ಥಿತಿ ಇಲ್ಲವೆಂದು ಸಭೆಯಲ್ಲಿಯೇ ಪ್ರಸ್ತಾಪ ಮಾಡಿದ್ದೇನೆ. ವೈದ್ಯಕೀಯ ಸಿಬ್ಬಂದಿಯ ಕೊರತೆ ಇದೆ. ಕೊರೋನದಿಂದಾಗಿ ಸಾವನ್ನಪ್ಪುತ್ತಿರುವ ಸಂಖ್ಯೆ ಹೆಚ್ಚಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News