ಜು.31ರವರೆಗೆ ಜಲಮಂಡಳಿ ಕಚೇರಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ

Update: 2020-07-22 18:32 GMT

ಬೆಂಗಳೂರು, ಜು.21: ಕೊರೋನ ಸೋಂಕು ನಗರದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವುದರಿಂದ ಜು.31ರವರೆಗೆ ಮುನ್ನೆಚ್ಚರಿಕೆಯ ಕ್ರಮವಾಗಿ ಜಲಮಂಡಳಿಯ ಕೇಂದ್ರ ಕಚೇರಿ ಮತ್ತು ವಿಭಾಗ, ಉಪವಿಭಾಗ, ಸೇವಾಠಾಣೆಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಸಾರ್ವಜನಿಕರು ನೀರು ಮತ್ತು ಒಳಚರಂಡಿಗೆ ಸಂಬಂಧಿಸಿದ ಕುಂದು ಕೊರತೆಗಳನ್ನು ಬಗೆಹರಿಸಿಕೊಳ್ಳಲು ಮಂಡಳಿಯ ಅಧಿಕೃತ ವೆಬ್‍ಸೈಟ್: www.bwssb.gov.in ನಲ್ಲಿ ಕಚೇರಿಗಳ ದೂರವಾಣಿ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಗಳನ್ನು ಪ್ರಕಟಿಸಲಾಗಿರುತ್ತದೆ. ಹಾಗೂ ಮಂಡಳಿಯು ಈಗಾಗಲೇ ಸಾರ್ವಜನಿಕರ ಅನುಕೂಲಕ್ಕಾಗಿ ಆನ್‍ಲೈನ್‍ನಲ್ಲಿ ಹಲವಾರು ಸೇವೆಗಳನ್ನು ಒದಗಿಸುತ್ತಿದ್ದು, ತಮ್ಮ ಅಹವಾಲುಗಳನ್ನು ಮಂಡಳಿಯ

1.    www.bwssb.gov.in,

2.    Twitter : chairman@bwssb.gov.in

3.     Email: bwssbcallcentre@gmail.com

4.     Whats app No.8762228888

5.     Help line number:1916/080-22238888

ಅಧಿಕೃತ ಸೋಷಿಯಲ್ ಮೀಡಿಯಾ/ವೆಬ್‍ಸೈಟ್‍ಗಳಲ್ಲಿ ಸಲ್ಲಿಸಬಹುದು. ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬಹುದು ಎಂದು ಜಲಮಂಡಳಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News