ಬಿಬಿಎಂಪಿ ಅಧಿಕಾರಿಗಳು-ನೌಕರರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಗೆ ಆದೇಶ

Update: 2020-07-23 16:49 GMT

ಬೆಂಗಳೂರು, ಜು.23: ಕೋವಿಡ್-19 ಸೋಂಕು ಸಂಬಂಧ ಬಿಬಿಎಂಪಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು, ನೌಕರರಿಗೆ ಖಾಸಗಿ ಆಸ್ಪತೆಗಳಲ್ಲಿ ಉಚಿತ ಚಿಕಿತ್ಸೆ ಒದಗಿಸಲು ಬಿಬಿಎಂಪಿ ಮಹತ್ವದ ಆದೇಶ ಹೊರಡಿಸಿದೆ.

ಸೋಂಕಿತ ನೌಕರರು ತಮ್ಮ ವಲಯ ವ್ಯಾಪ್ತಿಯ ಆರೋಗ್ಯಾಧಿಕಾರಿ ಅವರಿಂದ ಆನ್‍ಲೈನ್ ಪೋರ್ಟಲ್‍ನಲ್ಲಿ ನೋಂದಣಿ ಮಾಡಿ, ಖಾಸಗಿ ಆಸ್ಪತ್ರೆಗಳಲ್ಲಿ ಸರಕಾರ ನಿಗದಿಪಡಿಸಿರುವ ವೈದ್ಯಕೀಯ ಬೆಡ್‍ಗಳಲ್ಲಿ ಆಯುಷ್ಮಾನ್-ಆರೋಗ್ಯ ಕರ್ನಾಟಕ ಯೋಜನೆಯಡಿ ಉಚಿತವಾಗಿ ಚಿಕಿತ್ಸೆ ಪಡೆಯಲು ಸೂಚಿಸಲಾಗಿದೆ.

ಒಂದು ವೇಳೆ ಸರಕಾರ ನಿಗದಿಪಡಿಸಿದ ಶೇಕಡಾ 50ರಷ್ಟು ಬೆಡ್ ಭರ್ತಿಯಾಗಿದ್ದರೆ, ಖಾಸಗಿ ಆಸ್ಪತ್ರೆ ಬೆಡ್‍ಗಳಿಗೆ ಸರಕಾರ ನಿಗದಿಪಡಿಸಿದ ಮೊತ್ತವನ್ನು ಪಾಲಿಕೆಯ ಮ್ಯಾನೇಜ್ ಹೆಲ್ತ್ ಕೇರ್ ವತಿಯಿಂದ ಪಾವತಿಸಲು ಅನುಮತಿ ನೀಡಿ ವಿಶೇಷ ಆಯುಕ್ತರು ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News