ಜ್ವರ ಕೊರೋನ ಸೋಂಕಿನ ಪ್ರಮುಖ ಲಕ್ಷಣ ಅಲ್ಲ: ಏಮ್ಸ್ ಅಧ್ಯಯನದಿಂದ ಬಹಿರಂಗ

Update: 2020-07-24 18:08 GMT

ಹೊಸದಿಲ್ಲಿ, ಜು. 24: ಜ್ವರ ಪ್ರಮುಖ ರೋಗ ಲಕ್ಷಣ ಎಂದು ಪರಿಗಣಿಸಿರುವುದರಿಂದ ಹಲವು ಕೊರೋನ ಪ್ರಕರಣಗಳು ನಮ್ಮ ಗಮನಕ್ಕೆ ಬರದಿರುವ ಸಾಧ್ಯತೆ ಇದೆ ಎಂದು ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್ ಪ್ರಕಟಿಸಿದ ಅಧ್ಯಯನ ವರದಿ ತಿಳಿಸಿದೆ.

ಹೊಸದಿಲ್ಲಿಯಲ್ಲಿರುವ ದೇಶದ ಸಾರ್ವಜನಿಕ ಅತ್ಯುಚ್ಛ ಆಸ್ಪತ್ರೆಯಾದ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸಸ್ (ಏಮ್ಸ್) ದಾಖಲು ಮಾಡಲಾದ ಉತ್ತರ ಭಾರತದ ಕೊರೋನ ಸೋಂಕು ದೃಢಪಟ್ಟ 144 ರೋಗಿಗಳ ಮೇಲೆ ನಡೆಸಲಾದ ಈ ಅಧ್ಯಯನ ವರದಿಯನ್ನು ಗುರುವಾರ ಪ್ರಕಟಿಸಲಾಗಿದೆ.

ಏಮ್ಸ್‌ನ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಸೇರಿದಂತೆ 29 ಲೇಖಕರು ಈ ಅಧ್ಯಯನ ನಡೆಸಿದ್ದಾರೆ. ಮಾರ್ಚ್ 23ರಿಂದ ಎಪ್ರಿಲ್ 15ರ ವರೆಗಿನ ದತ್ತಾಂಶವನ್ನು ಈ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ. ಅಧ್ಯಯನಕ್ಕೆ ಒಳಪಡಿಸಲಾದ 144 ರೋಗಿಗಳಲ್ಲಿ ಶೇ. 93 (134) ಪುರುಷರು. 10 ರೋಗಿಗಳು ವಿದೇಶಿ ಪ್ರಜೆಗಳು. ನಮ್ಮ ಕೇವಲ ಶೇ. 17 ಕೊರೋನ ರೋಗಿಗಳಲ್ಲಿ ಮಾತ್ರ ಜ್ವರ ಕಾಣಿಸಿಕೊಂಡಿದೆ. ಜಗತ್ತಿನ ಇತರ ವರದಿಗಳಿಗೆ ಹೋಲಿಸಿದರೆ ಇದು ತುಂಬಾ ಕಡಿಮೆ ಎಂದು ಅಧ್ಯಯನ ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News