30 ವರ್ಷದ ವ್ಯಕ್ತಿಗೆ ಮೊದಲ ಡೋಸ್: ಭಾರತದ ಮೊದಲ ಕೋವಿಡ್ ಲಸಿಕೆಯ ಮಾನವ ಪ್ರಯೋಗ ಆರಂಭ

Update: 2020-07-25 10:44 GMT

ಹೊಸದಿಲ್ಲಿ: ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ  ಐಸಿಎಂಆರ್ ಹಾಗೂ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಜಿ ಜತೆಗೂಡಿ ಅಭಿವೃದ್ಧಿಪಡಿಸಿರುವ ಭಾರತದ ಮೊದಲ ಕೋವಿಡ್ ಲಸಿಕೆ ಕೊವ್ಯಾಕ್ಸಿನ್ ಇದರ ಮೊದಲ ಪ್ರಯೋಗಾರ್ಥ ಡೋಸ್ ಅನ್ನು 30 ವರ್ಷದ ವ್ಯಕ್ತಿಯೊಬ್ಬರಿಗೆ ದಿಲ್ಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ನೀಡಲಾಯಿತು.

ಲಸಿಕೆ ಪ್ರಯೋಗಕ್ಕೆ ಮುನ್ನ ನಡೆಸಲಾಗುವ ಹಲವಾರು ಪರೀಕ್ಷೆಗಳಿಗಾಗಿ 12 ಮಂದಿಯನ್ನು ಕರೆಸಲಾಗಿತ್ತು ಹಾಗೂ ಅವರಲ್ಲಿ 10 ಆರೋಗ್ಯವಂತ ವ್ಯಕ್ತಿಗಳನ್ನು ಹಂತಹಂತವಾಗಿ ಲಸಿಕೆ ಪ್ರಯೋಗಕ್ಕೆ ಆರಿಸಲಾಯಿತು.

ಇಡೀ ಪ್ರಕ್ರಿಯೆಯ ಮೇಲೆ ನಿಗಾ ಇಡಲಿರುವ ಎಥಿಕ್ಸ್ ಸಮಿತಿಗೆ ಮೊದಲ ಡೋಸ್ ನಂತರ ವ್ಯಕ್ತಿಯ ಆರೋಗ್ಯ ಸ್ಥಿತಿ ಕುರಿತಾದ ವರದಿ ನೀಡಲಾಗುವುದು. ಒಟ್ಟು 100 ಆರೋಗ್ಯವಂತ ವ್ಯಕ್ತಿಗಳಿಗೆ ಈ ಲಸಿಕೆಯನ್ನು ಪ್ರಯೋಗದ ವೇಳೆ ಏಮ್ಸ್ ‍ನಲ್ಲಿ ನೀಡಲಾಗುವುದು.

ಮೊದಲ ಹಂತದಲ್ಲಿ ಲಸಿಕೆಯನ್ನು ಆಯ್ದ ಆರೋಗ್ಯವಂತ 18ರಿಂದ 55 ವರ್ಷ ವಯೋಮಿತಿಯವರಿಗೆ ನೀಡಲಾಗುವುದಾದರೆ, ಎರಡನೇ ಹಂತದಲ್ಲಿ  12ರಿಂದ 65 ವರ್ಷ ವಯಸ್ಸಿನ 750 ಜನರಿಗೆ ಲಸಿಕೆ ಪ್ರಯೋಗ ಮಾಡಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News