ಕಚೇರಿ ಸಿಬ್ಬಂದಿಗೆ ಕೊರೋನ: ಸಹಕಾರ ಸಚಿವರು ಹೋಂ ಕ್ವಾರಂಟೈನ್

Update: 2020-07-28 04:20 GMT

ಬೆಂಗಳೂರು, ಜು.28: ರಾಜ್ಯ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರ ವಿಕಾಸಸೌಧದ ನೆಲ ಮಹಡಿ ಕೊಠಡಿ ಸಂಖ್ಯೆ 38-39ರಲ್ಲಿರುವ ಕಚೇರಿಯ ಆಪ್ತ ಸಿಬ್ಬಂದಿಯೊಬ್ಬರಿಗೆ ಕೊರೋನ ಸೋಂಕು ತಗಲಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಕಚೇರಿಯನ್ನು ಸ್ಯಾನಿಟೈಸ್ ಮಾಡಲಾಗಿದೆ.

ಸಿಬ್ಬಂದಿಗೆ ಸೋಂಕು ತಗಲಿರುವ ಹಿನ್ನೆಲೆಯಲ್ಲಿ ಸಚಿವ ಎಸ್.ಟಿ. ಸೋಮಶೇಖರ್ ಅವರು ಹೋಂ ಕ್ವಾರಂಟೈನ್‌ಗೆ ಗೆ ಒಳಗಾಗಲಿದ್ದಾರೆ. ಅಲ್ಲದೆ, ಇಂದಿನಿಂದ 7 ದಿನಗಳ ಕಾಲ ಕಚೇರಿಗೆ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News