ಶಾಸಕಿ ಸೌಮ್ಯಾ ರೆಡ್ಡಿಯಿಂದ ಉಚಿತ ಆರೋಗ್ಯಕಿಟ್ ವಿತರಣೆ

Update: 2020-08-05 17:09 GMT

ಬೆಂಗಳೂರು, ಆ.5: ನಗರದಲ್ಲಿ ಹೋಮ್ ಐಸೋಲೇಷನ್ ಇರುವಂತಹ ಮನೆಗಳಿಗೆ ಶಾಸಕಿ ಸೌಮ್ಯಾರೆಡ್ಡಿ ಮೂರು ಸಾವಿರ ರೂ. ಮೌಲ್ಯದ ಔಷಧಿಗಳ ಆರೋಗ್ಯ ಕಿಟ್‍ನ್ನು ವಿತರಿಸಿದರು.

ಇಲ್ಲಿನ ಜಯನಗರದ ಬೈರಸಂದ್ರ ವಾರ್ಡ್‍ನಲ್ಲಿ ಸಮಾರು 150ಕ್ಕೂ ಹೆಚ್ಚು ಕೋವಿಡ್ ಹೋಮ್ ಐಸೋಲೇಷನ್ ಮನೆಗಳಿಗೆ ತರಳಿ ಅವರಿಗೆ ಅಗತ್ಯವಿರುವಂತಹ ಔಷಧಿ ಕಿಟ್‍ಗಳನ್ನು ವಿತರಿಸಿ, ಸಾರ್ವಜನಿಕರ ಪರಸ್ಪರ ಸಹಕಾರದಿಂದ ಮಾತ್ರ ಕೋವಿಡ್‍ನ್ನು ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯವೆಂದು ತಿಳಿಸಿದರು.

ಹೋಮ್ ಐಸೋಲೇಷನ್‍ನಲ್ಲಿರುವವರಿಗೆ ಮೂಲಭೂತ ಅವಶ್ಯಕತೆಗಳಿಗೆ ಕೊರತೆಯಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಉಚಿತವಾಗಿ ಆರೋಗ್ಯ ಕಿಟ್‍ಗಳನ್ನು ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಅವರ ಅವಶ್ಯಕತೆಗಳನ್ನು ನೋಡಿಕೊಂಡು ಅಗತ್ಯ ವಸ್ತುಗಳನ್ನು ವಿತರಿಸಲಾಗುವುದೆಂದರು. ಈ ವೇಳೆ ಪಾಲಿಕೆ ಸದಸ್ಯ ಎನ್.ನಾಗರಾಜ್ ಸೇರಿ ಮತ್ತಿತರರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News