ಆರ್‌ಬಿಐ ರೆಪೊ ದರದಲ್ಲಿ ಬದಲಾವಣೆ ಇಲ್ಲ: ಶಕ್ತಿಕಾಂತ್ ದಾಸ್

Update: 2020-08-06 07:00 GMT

ಹೊಸದಿಲ್ಲಿ, ಆ.6:ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಣಕಾಸು ನೀತಿ ಸಮಿತಿಯು ಪ್ರಮುಖ ಸಾಲ ದರಗಳಾದ ರೆಪೊ ದರ ಹಾಗೂ ರಿವರ್ಸ್ ರೆಪೊ ದರವನ್ನು ಬದಲಾಯಿಸದೆ ಬಿಟ್ಟಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಗುರುವಾರ ಪ್ರಕಟಿಸಿದ್ದಾರೆ.

"ಹಣಕಾಸು ನೀತಿ ಸಮಿತಿಯು ಪಾಲಿಸಿ ರೆಪೊ ದರವನ್ನು ಶೇಕಡಾ 4ಕ್ಕೆ ಉಳಿಸಿಕೊಳ್ಳಲು ನಿರ್ಧರಿಸಿದೆ. ಜಾಗತಿಕ ಆರ್ಥಿಕ ಚಟುವಟಿಕೆಗಳು ದುರ್ಬಲವಾಗಿ ಉಳಿದಿವೆ. ಆದರೆ, ಜಾಗತಿಕ ಹಣಕಾಸು ಮಾರುಕಟ್ಟೆಗಳು ಉತ್ಸಾಹಭರಿತವಾಗಿವೆ'' ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

ಹಣದುಬ್ಬರ ಒತ್ತಡದ ನಡುವೆಯೂ ಕೊರೋನವೈರಸ್ ಪ್ರಕರಣಗಳು ಗಗನಕ್ಕೇರುತ್ತಿರುವುದರಿಂದ ಭಾರತದ ಹದಗೆಟ್ಟಿರುವ ಆರ್ಥಿಕ ದೃಷ್ಟಿಕೋನದಿಂದಾಗಿ ಕೇಂದ್ರೀಯ ಬ್ಯಾಂಕ್ ಪ್ರಮುಖ ದರಗಳನ್ನು ಕಡಿತಗೊಳಿಸುತ್ತದೆ ಎಂದು ವ್ಯಾಪಕವಾಗಿ ನಿರೀಕ್ಷಿಸಲಾಗಿತ್ತು.

ರಾಯಿಟರ್ಸ್ ಸಮೀಕ್ಷೆಯಲ್ಲಿ ಮೂರನೇ ಎರಡರಷ್ಟು ಅರ್ಥಶಾಸ್ತ್ರಜ್ಞರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೊ ದರವನ್ನು ಇನ್ನೂ 25 ಬೇಸಿಸ್ ಪಾಯಿಂಟ್‌ಗಳಿಂದ(ಬಿಪಿಎಸ್) ಕಡಿತಗೊಳಿಸಲಿದೆ ಹಾಗೂ ಮುಂದಿನ ತ್ರೈಮಾಸಿಕದಲ್ಲಿ ದಾಖಲೆಯ ಕನಿಷ್ಠ ಶೇ.3.50ಕ್ಕೆ ಇಳಿಯಲಿದೆ ಎಂದು ನಿರೀಕ್ಷಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News