ವಂಚನೆ ಆರೋಪ: ಪ್ರಕರಣ ದಾಖಲು

Update: 2020-08-07 18:31 GMT

ಬೆಂಗಳೂರು, ಆ.7: ಹಳೇ ಟಿವಿ ಸೇರಿ ಇನ್ನಿತರ ಇಲೆಕ್ಟ್ರಾನಿಕ್ ಉಪಕರಣಗಳಲ್ಲಿನ ರೆಡ್ ಮಕ್ರ್ಯೂರಿಗೆ ಬಹು ಬೇಡಿಕೆ ಇದೆ ಎಂದು ನಂಬಿಸಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಣಸವಾಡಿ ನಿವಾಸಿ ಶ್ರೀಧರ್ ಎಂಬವರು ವಂಚನೆಗೊಳಗಾಗಿದ್ದು, ಇವರು ಕೊಟ್ಟ ದೂರಿನ ಮೇರೆಗೆ ಮನೋಜ್, ಸ್ಟೀಫನ್, ಶ್ರೀಧರ್ ಸೇರಿ ಐವರ ವಿರುದ್ಧ ಹೆಬ್ಬಾಳ ಠಾಣೆ ಪೊಲೀಸರು ದೂರು ದಾಖಲಿಸಿದ್ದಾರೆ.

ದೂರುದಾರ ಶ್ರೀಧರ್ ಕಮ್ಮನಹಳ್ಳಿಯಲ್ಲಿ ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದು, ರೆಡ್ ಮಕ್ರ್ಯೂರಿಗೆ ಹೆಚ್ಚು ಬೇಡಿಕೆ ಇದೆ ಎಂಬುದನ್ನು ಸಾಮಾಜಿಕ ಜಾಲತಾಣದಲ್ಲಿ ಗಮನಿಸಿದ್ದರು. ಸಾಗರ್ ಎಂಬಾತ ಶ್ರೀಧರ್‌ಗೆ ಕರೆ ಮಾಡಿದ್ದು, ಮನೋಜ್ ಎಂಬಾತನ ಸ್ನೇಹಿತನ ಬಳಿ ಒಂದು ರೆಡ್ ಮಕ್ರ್ಯೂರಿ ಇದೆ, ಅದು 3 ಕೋಟಿ ರೂಪಾಯಿ ಬೆಲೆ ಬಾಳುತ್ತದೆ. ಈ ವಿಚಾರ ಮಕ್ರ್ಯೂರಿ ಹೊಂದಿರುವ ವ್ಯಕ್ತಿಗೆ ಗೊತ್ತಿಲ್ಲ. ಅದನ್ನು ನಾವೇ ಖರೀದಿಸಿ ಮಾರಾಟ ಮಾಡಿದರೆ, ದುಪ್ಪಟ್ಟು ಹಣ ಬರಲಿದೆ ಎಂದು ನಂಬಿಸಿದ್ದಾರೆ ಎನ್ನಲಾಗಿದೆ.

ತದನಂತರ, 3 ಲಕ್ಷ ರೂ. ಹೊಂದಿಸಿದ್ದ ಶ್ರೀಧರ್, ಜು.23ರಂದು ಸಾಗರ್ ಹಾಗೂ ಇನ್ನಿತರರ ಜತೆ ರೆಡ್ ಮಕ್ರ್ಯೂರಿ ಖರೀದಿಸಲು ಕಾರಿನಲ್ಲಿ ಚನ್ನರಾಯಪಟ್ಟಣದ ಬಳಿ ಕರೆದುಕೊಂಡು ಹೋಗಿ, ಅಲ್ಲಿ ಶ್ರೀಧರ್ ಬಳಿಯ ಹಣ ಕಸಿದುಕೊಂಡು ಕೊಲೆ ಮಾಡುವುದಾಗಿ ೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News