ದಿಲ್ಲಿ ಗ್ಯಾಂಗ್‌ನ ಇಬ್ಬರು ಸದಸ್ಯರ ಬಂಧನ: 1 ಕೋಟಿ ಮೌಲ್ಯದ ಚಿನ್ನಾಭರಣ ವಶಕ್ಕೆ

Update: 2020-08-08 09:57 GMT

ಹೊಸದಿಲ್ಲಿ, ಆ.8: ಜನರ ಮನಸ್ಸನ್ನುಬೇರೆಡೆಗೆ ಸೆಳೆದು ದರೋಡೆ ಮಾಡುವಲ್ಲಿ ಹೆಸರುವಾಸಿಯಾಗಿರು ಥಕ್-ಥಕ್ ಗ್ಯಾಂಗ್‌ನ ಇಬ್ಬರು ಸದಸ್ಯರುಗಳನ್ನು ಬಂಧಿಸಿರುವ ದಿಲ್ಲಿ ಪೊಲೀಸರು ಅವರಿಂದ 1 ಕೋ.ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ,

ಆರೋಪಿಗಳನ್ನು ಇಂದರ್‌ಪುರಿ ನಿವಾಸಿ ಸಂದೀಪ್(22 ವರ್ಷ) ಹಾಗೂ ಮದನ್‌ಗಿರಿ ನಿವಾಸಿ ಸಂತೋಷ್(20)ಎಂದು ಗುರುತಿಸಲಾಗಿದೆ. ಬುಧವಾರ ರಾಣಿ ಝಾನ್ಸಿ ರೋಡ್‌ನಲ್ಲಿ ಈ ಗ್ಯಾಂಗ್ ಚಿನ್ನಾಭರಣವನ್ನು ಕಸಿದುಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಸಿಟಿವಿ ಫುಟೇಜ್‌ನ್ನು ಸ್ಕಾನಿಂಗ್ ಮಾಡಿದ ಬಳಿಕ ಉದ್ದನೆಯ ಕೂದಲನ್ನು ಆಧರಿಸಿ ಓರ್ವ ಆರೋಪಿಯನ್ನು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News