ಬೆಂಗಳೂರಿನ ಈ ಮೂರು ವಾರ್ಡ್ ಗಳಲ್ಲಿ ತಲಾ 300ಕ್ಕೂ ಅಧಿಕ ಸಕ್ರಿಯ ಕೊರೋನ ಪ್ರಕರಣ

Update: 2020-08-08 13:38 GMT

ಬೆಂಗಳೂರು, ಆ.8: ನಗರದ ಮೂರು ವಾರ್ಡ್ ಗಳಲ್ಲಿ ತಲಾ 300ಕ್ಕೂ ಅಧಿಕ ಸಕ್ರಿಯ ಸೋಂಕಿತರು ಪತ್ತೆಯಾಗಿದ್ದು, ಸಂಪಂಗಿರಾಮನಗರ, ಬೆಳ್ಳಂದೂರು ಮತ್ತು ಸಿಂಗಸಂದ್ರದಲ್ಲಿ ಅಧಿಕ ಸೋಂಕಿತರಿದ್ದಾರೆ.

ಜುಲೈ ಆರಂಭದಲ್ಲಿ 80ಕ್ಕಿಂತಲೂ ಕಡಿಮೆ ವಾರ್ಡ್ ಗಳಲ್ಲಿ ಕೋವಿಡ್ ಸೋಂಕಿತರು ಕಂಡುಬಂದಿದ್ದರು. ನಂತರ ಎಲ್ಲ 198 ವಾರ್ಡ್ ಗಳಲ್ಲಿ ತಲಾ 100 ರಿಂದ 120 ರವರೆಗೆ ಸೋಂಕಿತರು ಹಾಗೂ 8 ವಾರ್ಡ್ ಗಳಲ್ಲಿ 10 ಕ್ಕಿಂತ ಕಡಿಮೆ ಸೋಂಕಿತರು ಪತ್ತೆಯಾಗಿದ್ದಾರೆ.

ಪ್ರಸಕ್ತ ನಗರದಲ್ಲಿ 69 ಸಾವಿರಕ್ಕೂ ಅಧಿಕ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 33 ಸಾವಿರಕ್ಕೂ ಅಧಿಕ ಸಕ್ರಿಯ ಪ್ರಕರಣಗಳಲ್ಲಿ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ನಿತ್ಯ 8 ರಿಂದ 10 ಸಾವಿರ ಕೋವಿಡ್ ಸೋಂಕು ಪರೀಕ್ಷೆ ಮಾಡಲಾಗುತ್ತಿದ್ದು, ಸೋಂಕಿತರ ಸಂಖ್ಯೆ ಅಧಿಕವಾಗುತ್ತಿದೆ. ಮುಂದಿನ ದಿನಗಳಲ್ಲಿ ಮನೆ ಮನೆ ಆರೋಗ್ಯ ಸಮೀಕ್ಷೆ ನಡೆಸುವ ಮೂಲಕ ಪರೀಕ್ಷೆಯನ್ನು 20 ಸಾವಿರಕ್ಕೆ ಹೆಚ್ಚಳ ಮಾಡುವ ಗುರಿಯನ್ನು ಬಿಬಿಎಂಪಿ ಇಟ್ಟುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News