ಬಿಎಂಟಿಸಿಗೆ ಈ ವರ್ಷ ಹೊಸದಾಗಿ 3 ಸಾವಿರ ಬಸ್‍ಗಳ ಸೇರ್ಪಡೆ

Update: 2020-08-08 18:19 GMT

ಬೆಂಗಳೂರು, ಆ.8: ನಗರದ ಕಟ್ಟಕಡೆಯ ಪ್ರಯಾಣಿಕರಿಗೂ ಬಸ್ ಸೌಲಭ್ಯ ಕಲ್ಪಿಸುವ ಸಲುವಾಗಿ ಪರಿಣಾಮಕಾರಿ ಯೋಜನೆ ರೂಪಿಸಲಾಗುತ್ತಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ಹೇಳಿದ್ದಾರೆ.

ಇಂದು ಆಯೋಜಿಸಿದ್ದ ವೆಬಿನಾರ್‍ವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಗರದಲ್ಲಿ ಬಸ್‍ಗಳ ಕಾರ್ಯಾಚರಣೆ ಅಧಿಕಗೊಳಿಸುವ ಹಿನ್ನೆಲೆಯಲ್ಲಿ ಸದ್ಯಕ್ಕಿರುವ ಅವಕಾಶಗಳ ಕುರಿತು ಅಧ್ಯಯನ ನಡೆಸಿದ್ದೇವೆ. ಅದಕ್ಕೆ ಪೂರಕವಾದ ಮೂಲ ಸೌಕರ್ಯವನ್ನೂ ನಿರ್ಮಾಣ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಬೆಂಗಳೂರಿನ ಪ್ರಯಾಣಿಕರ ಸಂಖ್ಯೆ ಮುಂಬೈ ನಗರಕ್ಕೆ ಹೋಲಿಸಿಕೊಂಡರೆ ಅಧಿಕವಾಗಿದೆ. ಕೊರೋನ ಸಂದರ್ಭದಲ್ಲಿ ಪ್ರಯಾಣಿಕರ ಹಿತದೃಷ್ಟಿಯಿಂದ ಸುರಕ್ಷತೆ ಮಾರ್ಗಗಳನ್ನು ಅನುಸರಿಸಿಕೊಂಡು ಕಾರ್ಯಾಚರಣೆ ಮಾಡಲಾಗುತ್ತಿದೆ. ಪ್ರತಿದಿನ 8-10 ಲಕ್ಷಕ್ಕೂ ಅಧಿಕ ಜನರು ಬಳಕೆ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಬೆಂಗಳೂರು ನಗರದಲ್ಲಿ ಪ್ರಸ್ತುತ 6, 500 ಬಸ್‍ಗಳಿದ್ದು, ನಗರದಾದ್ಯಂತ ಕೊನೆ ಹಂತದವರೆಗೆ ಸೇರಲು ಕನಿಷ್ಠ 10 ಸಾವಿರ ಬಸಡ್‍ಗಳ ಅಗತ್ಯವಿದೆ. ಈ ವರ್ಷದಲ್ಲೇ ಹೊಸದಾಗಿ ಮೂರು ಸಾವಿರ ಬಸ್‍ಗಳು ಬಿಎಂಟಿಸಿಗೆ ಸೇರ್ಪಡೆಯಾಗಲಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News