ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಉಚಿತ ಆನ್‍ಲೈನ್ ತರಬೇತಿ

Update: 2020-08-10 18:55 GMT

ಬೆಂಗಳೂರು, ಆ.10: ಪ್ರಸಕ್ತ ಸಾಲಿನಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿರುವ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಉಚಿತವಾಗಿ ಆನ್‍ಲೈನ್ ಶಿಕ್ಷಣ ತರಬೇತಿ ಕೊಡಲು ‘ಸತ್ಯಂ ಶಿವಂ ಸುಂದರಂ’ ಸರಕಾರೇತರ ಸಂಸ್ಥೆ ಮುಂದಾಗಿದೆ.

‘ಇದು ನಮ್ಮ ಇ ಶಾಲೆ’ ಯೋಜನೆಯಡಿ ಫೇಸ್‍ಬುಕ್–ಯೂಟ್ಯೂಬ್ ಮೂಲಕ ಈ ಉಚಿತ ಶಿಕ್ಷಣ ನೀಡಲಾಗುವುದು’ ಎಂದು ಸಂಸ್ಥೆಯ ಅಧ್ಯಕ್ಷ ರವಿರಾಜ್ ಜೀವನ್‍ರಾವ್ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯದಾದ್ಯಂತ ನುರಿತ ಶಿಕ್ಷಕರು ತರಗತಿ ತೆಗೆದುಕೊಳ್ಳಲಿದ್ದಾರೆ ಎಂದು ಅವರು ಹೇಳಿದ್ದಾರೆ. ವಿವರಗಳಿಗೆ http://satyamshivamsundaram.org ವೆಬ್‍ಸೈಟ್‍ಗೆ ಭೇಟಿ ನೀಡಬಹುದು ಅಥವಾ  sathyamngo@gmail.com ಗೆ ಮೇಲ್ ಮಾಡಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News