ವಿಮಾನ ದುರಂತ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಮಲ್ಲಪ್ಪುರಂ ಎಸ್ಪಿ, ಜಿಲ್ಲಾ ಕಲೆಕ್ಟರ್‌ಗೆ ಕೊರೋನ ಪಾಸಿಟಿವ್

Update: 2020-08-14 08:48 GMT
ಮಲ್ಲಪ್ಪುರಂ ಜಿಲ್ಲಾ ಕಲೆಕ್ಟರ್ ಕೆ. ಗೋಪಾಲಕೃಷ್ಣನ್

 ಕೊಚ್ಚಿ, ಆ.14:ಕೋಝಿಕೋಡ್‌ನಲ್ಲಿ ಸಂಭವಿಸಿರುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ದುರಂತ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಮಲ್ಲಪ್ಪುರಂ ಪೊಲೀಸ್ ಅಧೀಕ್ಷಕ (ಎಸ್ಪಿ) ಹಾಗೂ ಯು.ಅಬ್ದುಲ್ ಕರೀಂ ಹಾಗೂ ಮಲ್ಲಪ್ಪುರಂ ಜಿಲ್ಲಾ ಕಲೆಕ್ಟರ್ ಕೆ. ಗೋಪಾಲಕೃಷ್ಣನ್ ನೊವೆಲ್ ಕೊರೋನ ಸೋಂಕು ತಗಲಿರುವುದು ಶುಕ್ರವಾರ ದೃಢಪಟ್ಟಿದೆ.

ಕರಿಪುರ ವಿಮಾನ ನಿಲ್ದಾಣದ ರನ್‌ವೇಯಿಂದ ವಿಮಾನ ಕೆಳಜಾರಿದ ಪರಿಣಾಮ ಮುಖ್ಯಪೈಲಟ್ ಹಾಗೂ ಸಹ ಪೈಲಟ್ ಸಹಿತ 18 ಮಂದಿ ಸಾವನ್ನಪ್ಪಿದ್ದರು.

ಕರೀಂ ಹಾಗೂ ಗೋಪಾಲಕೃಷ್ಣನ್ ಆಸ್ಪತ್ರೆಯಲ್ಲಿದ್ದು, ಕೊರೋನ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಮಾನ ರಕ್ಷಣಾಕಾರ್ಯಾಚರಣೆಯಲ್ಲಿ ತೊಡಗಿದ್ದವರು ಕೊರೋನ ಹರಡುವುದನ್ನು ತಡೆಗಟ್ಟಲು ಸ್ವಯಂ ಕ್ವಾರಂಟೈನ್‌ಗೆ ಒಳಗಾಗಬೇಕೆಂದು ಕೇರಳ ಆರೋಗ್ಯ ಸಚಿವಾಲಯ ವಿನಂತಿಸಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News