ಅತ್ಯಂತ ಶಕ್ತಿಶಾಲಿ ಯೋಧ ಗಡಿಯಲ್ಲಿರುತ್ತಾನೆ: ಸದನದಲ್ಲಿ ಆಸನ ಬದಲಾದ ಬಗ್ಗೆ ಪೈಲಟ್ ಪ್ರತಿಕ್ರಿಯೆ

Update: 2020-08-14 09:37 GMT

ಜೈಪುರ, ಆ.14:ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‌ರೊಂದಿಗೆ ಮತ್ತೆ ಒಂದಾಗಿರುವ ಸಚಿನ್ ಪೈಲಟ್ ಇಂದು ವಿಶೇಷ ಅಧಿವೇಶನಕ್ಕೆ ಆಗಮಿಸಿದ ಬಳಿಕ ಅವರ ಬದಲಾಗಿರುವ ಆಸನವು ಚರ್ಚೆಯ ವಿಚಾರವಾಯಿತು.

ಉಪ ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಂಡಿರುವ ಪೈಲಟ್‌ರನ್ನು ಮುಖ್ಯಮಂತ್ರಿ ಗೆಹ್ಲೋಟ್‌ರಿಂದ ದೂರ ಇರಿಸಲಾಗಿದ್ದು, ವಿಪಕ್ಷಗಳ ಕುರ್ಚಿಗಳ ಪಕ್ಕ ಆಸನ ನೀಡಲಾಗಿತ್ತು. ಪೈಲಟ್ ಉಪಮುಖ್ಯಮಂತ್ರಿಯಾಗಿದ್ದಾಗ ಮುಖ್ಯಮಂತ್ರಿಗಳ ಪಕ್ಕದಲ್ಲಿ ಎರಡನೇ ಸಾಲಿನಲ್ಲಿ ಕುಳಿತುಕೊಳ್ಳುತ್ತಿದ್ದರು.

"ನನಗೆ ಇಲ್ಲಿ ಆಸನ ನೀಡಿದ್ದು ನೋಡಿ ಆಶ್ಚರ್ಯವಾಯಿತು. ಎರಡು ನಿಮಿಷ ಯೋಚಿಸಿದ ಬಳಿಕ, ಸರಕಾರ ಹಾಗೂ ವಿಪಕ್ಷಗಳ ಮಧ್ಯೆ ನನ್ನ ಆಸನವಿದೆ. ಇದು ಒಂದು ರೀತಿಯಲ್ಲಿ ಬಾರ್ಡರ್ ಇದ್ದಂತೆ. ಧೈರ್ಯಶಾಲಿ ಯೋಧರನ್ನು ಮಾತ್ರ ಕಳುಹಿಸಲಾಗುತ್ತದೆ ಎಂದು ಗೊತ್ತಾಯಿತು'' ಸಚಿನ್ ಹೇಳಿದರು.

 ಹಲವು ವಿಚಾರಗಳು ಹೇಳಬೇಕಾಗಿದೆ.ಹಲವಷ್ಟನ್ನು ಬಹಿರಂಗಪಡಿಸಬೇಕಾಗಿದೆ. ನಾವು ನಮ್ಮಕಾಯಿಲೆಯಿಂದ ಗುಣಮುಖರಾಗಿದ್ದು, ದಿಲ್ಲಿಯಲ್ಲಿ ವೈದ್ಯರನ್ನು ಸಂಪರ್ಕಿಸಿದ್ದೇವೆ ಹಾಗೂ ಇದೀಗ ನಾವು ಪಕ್ಷವನ್ನು ಸೇರಿದ್ದೇವೆ ಎಂದು ಸೂಚ್ಯವಾಗಿ ಸಚಿನ್ ಪೈಲಟ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News