ಕೇರಳದಲ್ಲಿ ಆ.16ರಿಂದ ಬ್ಯಾಂಕಿಂಗ್ ಸಮಯದಲ್ಲಿ ಬದಲಾವಣೆ

Update: 2020-08-15 04:17 GMT
ಸಾಂದರ್ಭಿಕ ಚಿತ್ರ

ಕಾಸರಗೋಡು, ಆ.15: ಕೊರೋನ ಹಿನ್ನಲೆ ಹಾಗೂ ಓಣಂ ಹಬ್ಬ ಹತ್ತಿರವಾಗುತ್ತಿರುವ ಹಿನ್ನಲೆಯಲ್ಲಿ ಬ್ಯಾಂಕುಗಳಲ್ಲಿ ಗ್ರಾಹಕರ ದಟ್ಟಣೆ ಮನಗಂಡು ಕೇರಳದಲ್ಲಿ ಆ.16ರಿಂದ ಬ್ಯಾಂಕಿಂಗ್ ಸಮಯಗಳಲ್ಲಿ ಬದಲಾವಣೆ ತರಲಾಗಿದೆ.

0, 1, 2 ಮತ್ತು 3 ಎಂಬ ಅಕೌಂಟ್ ನಂಬರ್‌ಗಳಲ್ಲಿ ಕೊನೆಗೊಳ್ಳುವ ಗ್ರಾಹಕರಿಗೆ ಬೆಳಗ್ಗೆ 10ರಿಂದ ಮಧ್ಯಾಹ್ನ 12ರ ಗಂಟೆ ತನಕ, 4, 5, 6 ಮತ್ತು 7 ನಂಬ್ರದವರಿಗೆ ಮಧ್ಯಾಹ್ನ 12ರಿಂದ ಅಪರಾಹ್ನ 2ರ ಗಂಟೆ ತನಕ ಮತ್ತು 8, 9 ಅಕೌಂಟ್ ನಂಬರ್‌ಗಳು ಕೊನೆಗೊಳ್ಳುವ ಗ್ರಾಹಕರಿಗೆ

ಅಪರಾಹ್ನ 2:30ರಿಂದ ಸಂಜೆ 4ರ ತನಕ ಸಮಯ ನೀಡಲಾಗಿದೆ.

ಆದರೆ ಸಾಲಕ್ಕೆ ಸಂಬಂಧಪಟ್ಟ ಹಾಗೂ ಇತರ ವ್ಯವಹಾರಗಳಿಗೆ ಈ ನಿಯಂತ್ರಣ ಅನ್ವಯವಾಗುವುದಿಲ್ಲ. ಸೆ.9ರ ತನಕ ಈ ನಿಯಂತ್ರಣ ಜಾರಿಯಲ್ಲಿರಲಿದೆ ಎಂದು ರಾಜ್ಯ ಮಟ್ಟದ ಬ್ಯಾಂಕಿಂಗ್ ಸಮಿತಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News