ಇನ್ನು ಮಧ್ಯ ಪ್ರದೇಶದ ಸರಕಾರಿ ಹುದ್ದೆಗಳು ರಾಜ್ಯದ ಜನರಿಗೆ ಮಾತ್ರ : ಸಿಎಂ ಚೌಹಾಣ್

Update: 2020-08-18 08:23 GMT

ಭೋಪಾಲ್: ಮಧ್ಯ ಪ್ರದೇಶದಲ್ಲಿ  ಸರಕಾರಿ ಹುದ್ದೆಗಳು ಇನ್ನು ಮುಂದೆ  ರಾಜ್ಯದ ಯುವಜನತೆಗೆ ಮೀಸಲಿರಿಸಲು ಸರಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.

ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ತಾವು ಮಾಡಿರುವ ಘೋಷಣೆಗಳ ಜಾರಿ ಕುರಿತಂತೆ ಚರ್ಚಿಸಲು ಸಿಂಗ್ ಅವರು  ತಮ್ಮ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಜತೆ ವೀಡಿಯೋ ಕಾನ್ಫರೆನ್ಸ್ ಮೂಲಕ ಚರ್ಚಿಸಿದ್ದಾರೆ.

“ನಮ್ಮ ಸರಕಾರ ಇಂದು ಒಂದು ಮಹತ್ವದ ನಿರ್ಧಾರ ಕೈಗೊಂಡಿದೆ. ರಾಜ್ಯದ ಸರಕಾರಿ ಉದ್ಯೋಗಗಳು ಕೇವಲ ರಾಜ್ಯದ ಯುವಜನತೆಗೆ ಲಭ್ಯವಾಗುವಂತಾಗಲು ಅಗತ್ಯ ಕಾನೂನು ಕ್ರಮಗಳನ್ನು ಸರಕಾರ ಕೈಗೊಳ್ಳಲಿದೆ'' ಎಂದು ಚೌಹಾಣ್ ತಿಳಿಸಿದ್ದಾರೆ.

ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಚೌಹಾಣ್ ಅವರು ಸರಕಾರಿ ಉದ್ಯೋಗಗಳು ರಾಜ್ಯದವರಿಗೇ ಮೀಸಲಾಗಿರಲಿದೆ ಎಂದಿದ್ದರಲ್ಲದೆ  ಪ್ರತಿಯೊಂದು ಯೋಜನೆಗೆ ಪ್ರತ್ಯೇಕವಾಗಿ ಜನರು ನೋಂದಣಿಗೊಳ್ಳುವ ಆಗತ್ಯವಿಲ್ಲದಂತೆ ಮಾಡಲು  ಏಕೈಕ ಡಾಟಾ ಬೇಸ್ ಅನ್ನು ಸರಕಾರ ತಯಾರಿಸಲಿದೆ ಎಂದು ತಿಳಿಸಿದ್ದರು.

ರಾಜ್ಯದಲ್ಲಿ ಒಬಿಸಿ ಮೀಸಲಾತಿಯನ್ನು ಶೇ 14ರಿಂದ ಶೇ 27ಕ್ಕೇರಿಸಲು ಹೋರಾಡುವುದಾಗಿಯೂ ಅವರು ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News