`ರಿಸರ್ವ್ ಬ್ಯಾಂಕ್ ಆಫ್ ಕೈಲಾಸ' ಸ್ಥಾಪಿಸಿದ ಸ್ವಘೋಷಿತ ದೇವಮಾನವ ನಿತ್ಯಾನಂದ

Update: 2020-08-18 10:26 GMT

ಹೊಸದಿಲ್ಲಿ: ಸ್ವಘೋಷಿತ ದೇವಮಾನವ ನಿತ್ಯಾನಂದನ ದ್ವೀಪ ರಾಷ್ಟ್ರ ಕೈಲಾಸದಲ್ಲಿ ಆತ ‘ರಿಸರ್ವ್ ಬ್ಯಾಂಕ್ ಆಫ್ ಕೈಲಾಸ’ ಕೂಡ ಸ್ಥಾಪಿಸಿದ್ದಾನೆಂಬ ಕುತೂಹಲಕಾರಿ ಮಾಹಿತಿ ಹೊರಬಿದ್ದಿದೆ. ಈ ಬ್ಯಾಂಕಿನ ಕರೆನ್ಸಿಯನ್ನು ಗಣೇಶ ಚತುರ್ಥಿ ದಿನದಂದು ಘೋಷಿಸಲಾಗುವುದೆಂಬ ಮಾಹಿತಿಯೂ ಇದೆ.

ಅತ್ಯಾಚಾರ ಸಹಿತ ಹಲವಾರು ಆರೋಪ ಎದುರಿಸುತ್ತಿರುವ ನಿತ್ಯಾನಂದನ ವಿರುದ್ಧ ಇಂಟರ್ ಪೋಲ್ ಈಗಾಗಲೇ ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸಿದೆ.

ನಿತ್ಯಾನಂದನ ವೀಡಿಯೋವೊಂದರಲ್ಲಿ ಆತ ತನ್ನ ರಿಸರ್ವ್ ಬ್ಯಾಂಕ್ ಆಫ್ ಕೈಲಾಸ ಕುರಿತು ಘೋಷಿಸುತ್ತಿರುವುದು ಹಾಗೂ ಅದರ ಆರ್ಥಿಕ ನೀತಿಗಳೂ ಸಿದ್ಧ ಎನ್ನುತ್ತಿರುವುದು ಕೇಳಿಸುತ್ತದೆ.

“ಗಣಪತಿ ದೇವರ ಕೃಪೆಯಿಂದ ರಿಸರ್ವ್ ಬ್ಯಾಂಕ್ ಆಫ್ ಕೈಲಾಸದ ಎಲ್ಲಾ ಮಾಹಿತಿಗಳನ್ನು ಬಹಿರಂಗಗೊಳಿಸಲಿದ್ದೇವೆ. ಎಲ್ಲವೂ ಸಿದ್ಧವಿದೆ” ಎಂದು ಆತ ಹೇಳುತ್ತಿರುವುದು ಕೇಳಿಸುತ್ತದೆ.

300 ಪುಟಗಳ ಆರ್ಥಿಕ ನೀತಿ, ಕರೆನ್ಸಿ ಎಕ್ಸ್‍ಚೇಂಜ್ ಕುರಿತ ಮಾಹಿತಿಗಳು ತಯಾರಿದೆ. ತಾನು ಈಗಾಗಲೇ  ರಿಸರ್ವ್ ಬ್ಯಾಂಕ್ ಆಫ್ ಕೈಲಾಸ ನಿರ್ವಹಿಸಲು ಒಂದು ದೇಶದ ಜತೆ ಒಪ್ಪಂದಕ್ಕೆ ಸಹಿ ಹಾಕಿದ್ದು,  ಅದು ಕಾನೂನುಬದ್ಧ ಹಾಗೂ ಈಗಾಗಲೇ ಅದನ್ನು ಕಾನೂನುಬದ್ಧವಾಗಿ ಸ್ಥಾಪಿಸಲಾಗಿದೆ ಎಂದಿದ್ದಾನೆ. ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ ನಿತ್ಯಾನಂದ ಈಗಾಗಲೇ 50 ವಿಚಾರಣೆಗಳಿಗೆ ಹಾಜರಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News