ಜೆಇಇ, ನೀಟ್ ಆಕಾಂಕ್ಷಿಗಳು ಪರೀಕ್ಷೆ ಬಗ್ಗೆ ಚರ್ಚೆ ಬಯಸಿದರೆ, ಮೋದಿ ಆಟಿಕೆಗಳ ಬಗ್ಗೆ ಮಾತನಾಡುತ್ತಾರೆ

Update: 2020-08-30 12:04 GMT

ಹೊಸದಿಲ್ಲಿ: ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕ ಹರಡಿರುವ ನಡುವೆಯೇ ಜೆಇಇ-ನೀಟ್ ಪರೀಕ್ಷೆಗಳನ್ನು ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿರುವ ಬಗ್ಗೆ ಚರ್ಚಿಸಲು ಜೆಇಇ-ನೀಟ್ ಆಕಾಂಕ್ಷಿಗಳು ಬಯಸಿದರೆ, ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ‘ಆಟಿಕೆ ಉದ್ಯಮ’ದ ಬಗ್ಗೆ ಮಾತನಾಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್‍ ಗಾಂಧಿ ಲೇವಡಿ ಮಾಡಿದ್ದಾರೆ.

"ಜೆಇಇ-ನೀಟ್ ಆಕಾಂಕ್ಷಿಗಳು ಪರೀಕ್ಷೆ ಬಗ್ಗೆ ಮೋದಿ ಚರ್ಚಿಸಬೇಕು ಎಂದು ಬಯಸಿದ್ದರು. ಆದರೆ ಮೋದಿ ಖಿಲೋನ್ ಪೇ ಚರ್ಚಾ" ನಡೆಸಿದರು ಎಂದು ಟ್ವಿಟರ್‍ ನಲ್ಲಿ ರಾಹುಲ್ ಟೀಕಿಸಿದ್ದಾರೆ.

ಸೆಪ್ಟೆಂಬರ್ ನಲ್ಲಿ ನೀಟ್ ಹಾಗೂ ಜೆಇಇ ಪರೀಕ್ಷೆಗಳನ್ನು ದೇಶಾದ್ಯಂತ ನಡೆಸಲು ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದ ಬೆನ್ನಲ್ಲೇ ರಾಹುಲ್ ಅವರ ಈ ಹೇಳಿಕೆ ಹೊರಬಿದ್ದಿದೆ. ಸೆಪ್ಟೆಂಬರ್ 30ರ ಒಳಗಾಗಿ ಎಲ್ಲ ವಿವಿಗಳು ಮತ್ತು ಕಾಲೇಜುಗಳು ಸೆಮಿಸ್ಟರ್ ಪರೀಕ್ಷೆ ನಡೆಸುವಂತೆ ಯುಜಿಸಿಗೆ ಸುಪ್ರೀಂಕೋರ್ಟ್ ಶುಕ್ರವಾರ ಅನುಮತಿ ನೀಡಿತ್ತು.

ಸೆಪ್ಟೆಂಬರ್ 13ರಂದು ನಿಟ್ ಪರೀಕ್ಷೆ ನಡೆಯಲಿದ್ದರೆ, ಜೆಇಇ ಸೆಪ್ಟೆಂಬರ್ ಮೊದಲ ವಾರ ನಡೆಯಲಿದೆ. 9.53 ಲಕ್ಷ ಹಾಗೂ 15.97 ಲಕ್ಷ ವಿದ್ಯಾರ್ಥಿಗಳು ಜೆಇಇ ಹಾಗೂ ನೀಟ್ ಪರೀಕ್ಷೆಗಳಿಗೆ ನೋಂದಾಯಿಸಿಕೊಂಡಿದ್ದು, ಸಾಂಕ್ರಾಮಿಕದ ಕಾರಣದಿಂದಾಗಿ ಎರಡು ಬಾರಿ ಪರೀಕ್ಷೆ ಮುಂದೂಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News