ಆರ್‌ಟಿಐಗೆ ಕೇಂದ್ರ ಸಚಿವಾಲಯದಿಂದ ಹಿಂದಿಯಲ್ಲಿ ಪ್ರತಿಕ್ರಿಯೆ ಸ್ವೀಕರಿಸಿದ ತಮಿಳುನಾಡು ಸಮಿತಿ

Update: 2020-09-04 18:47 GMT

ತಂಜಾವೂರು, ಸೆ. 5: ಕರ್ನಾಟಕ ಬಿಡುಗಡೆ ಮಾಡಿದ ನೀರಿನ ಪ್ರಮಾಣದ ಕುರಿತು ಕಾವೇರಿ ಹಕ್ಕುಗಳ ಮರು ಸ್ಥಾಪನಾ ಸಮಿತಿ (ಸಿಆರ್‌ಆರ್‌ಸಿ) ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಪ್ರಶ್ನಿಸಿ ಸಲ್ಲಿಸಿದ ಮನವಿಗೆ ಕೇಂದ್ರ ಜಲ ಆಯೋಗ (ಸಿಡಬ್ಲ್ಯುಸಿ) ಹಾಗೂ ಕೇಂದ್ರದ ಜಲ ಶಕ್ತಿ ಸಚಿವಾಲಯದ ಜಲ ಸಂಪನ್ಮೂಲ ಇಲಾಖೆ ಹಿಂದಿಯಲ್ಲಿ ಪ್ರತಿಕ್ರಿಯೆ ನೀಡಿರುವುದು ಸಮಿತಿಯನ್ನು ಕೆರಳಿಸಿದೆ.

ಸಮಿತಿಯ ಸಂಯೋಜಕ ಹಾಗೂ ತಮಿಳು ರಾಷ್ಟ್ರೀಯವಾದಿ ನಾಯಕ ಪಿ. ಮಣಿಯರಸನ್ ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸುಪ್ರೀಂ ಕೋರ್ಟ್‌ನ ಆದೇಶದಂತೆ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಹಾಗೂ ಕಾವೇರಿ ಜಲ ನಿಯಂತ್ರಣ ಸಮಿತಿ (ಸಿಡಬ್ಲುಆರ್‌ಸಿ)ಯನ್ನು ರೂಪಿಸಲಾಗಿದೆಯೇ ? ಹಾಗೂ ಕರ್ನಾಟಕ ಜೂನ್-ಜುಲೈಗೆ ಸೂಚಿಸಲಾದ ಜಲ ಪ್ರಮಾಣವನ್ನು ಬಿಡುಗಡೆ ಮಾಡಿದೆಯೇ ? ಎಂಬ ಕುರಿತು ಮಾಹಿತಿ ಹಕ್ಕು ಕಾಯ್ದೆ ಅಡಿ 8 ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡುವಂತೆ ಅರ್ಜಿ ಸಲ್ಲಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಈ ಆರ್‌ಟಿಐಗೆ ಎರಡು ಪ್ರತ್ಯುತ್ತರಗಳನ್ನು ಹಿಂದಿಯಲ್ಲಿ ಸ್ವೀಕರಿಸಲಾಗಿದೆ. ತಮಿಳುನಾಡಿನಲ್ಲಿ ಹಿಂದಿ ಶಿಕ್ಷಣದ ಮಾಧ್ಯಮ ಅಥವಾ ರಾಜ್ಯದ ಅಧಿಕೃತ ಭಾಷೆ ಅಲ್ಲ. ತಮಿಳುನಾಡಿನಲ್ಲಿ ತಮಿಳು ಅಥವಾ ಇಂಗ್ಲಿಷ್ ಅಧಿಕೃತ ಭಾಷೆಗಳು ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News