ನಕಲಿ ಗುಟ್ಕಾ ದಂಧೆ ಭೇದಿಸಿದ ಸಿಸಿಬಿ: ಅಪಾರ ಪ್ರಮಾಣದ ಗುಟ್ಕಾ ಜಪ್ತಿ

Update: 2020-09-09 11:13 GMT

ಬೆಂಗಳೂರು, ಸೆ.9: ನಕಲಿ ಗುಟ್ಕಾ ದಂಧೆಯೊಂದನ್ನು ಭೇದಿಸಿರುವ ಸಿಸಿಬಿ ಪೊಲೀಸರು ಅಪಾರ ಪ್ರಮಾಣದ ಗುಟ್ಕಾ ಜಪ್ತಿ ಮಾಡಿದ್ದಾರೆ.

ಕೆ.ಆರ್ ಮಾರ್ಕೆಟ್‍ನಲ್ಲಿ ನಕಲಿ ಗುಟ್ಕಾ ದಂಧೆ ನಡೆಯುತ್ತಿದ್ದ ಮಾಹಿತಿ ಮೇರೆಗೆ ಸಿಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಈ ವೇಳೆ 200 ಮೂಟೆ ನಕಲಿ ಗುಟ್ಕಾ, 3 ಲಾರಿಗಳನ್ನು ಜಪ್ತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಮತ್ತೊಂದೆಡೆ ನೆಲಮಂಗಲ ರಸ್ತೆಯಲ್ಲಿನ ಗೋಡೌನ್ ಮೇಲೆ ದಾಳಿ ಮಾಡಿದಾಗ ಕೆಲವರು ತಲೆಮರೆಸಿಕೊಂಡಿದ್ದು, ಸಿಸಿಬಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News