ಉದ್ಧವ್ ಠಾಕ್ರೆ ಫಾರ್ಮ್ ಹೌಸ್ ಗೆ ಅಕ್ರಮ ಪ್ರವೇಶ ಆರೋಪ: ಮೂವರು ರಿಪಬ್ಲಿಕ್ ಟಿವಿ ಸಿಬ್ಬಂದಿಯ ಸೆರೆ

Update: 2020-09-09 13:16 GMT

ಮುಂಬೈ: ರಾಯಗಢದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಸೇರಿದ ಫಾರ್ಮ್ ಹೌಸ್‍ ಗೆ ಸಂಬಂಧಿಸಿದ ಸ್ಥಳಕ್ಕೆ ಅಕ್ರಮವಾಗಿ ಪ್ರವೇಶಿಸಿದ ಆರೋಪದ ಮೇಲೆ ರಿಪಬ್ಲಿಕ್ ಟಿವಿಯ ವರದಿಗಾರ, ಕ್ಯಾಮರಾಮ್ಯಾನ್ ಹಾಗೂ ಚಾಲಕನನ್ನು ಬಂಧಿಸಲಾಗಿದೆ.

ಬಂಧಿತ ವರದಿಗಾರನನ್ನು ಅನುಜ್ ಕುಮಾರ್ ಎಂದು ಗುರುತಿಸಲಾಗಿದೆ. ಮೂವರನ್ನೂ ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ವಹಿಸಲಾಗಿದೆ. ಫಾರ್ಮ್ ಹೌಸ್‍ನ ರಾತ್ರಿ ಪಾಳಿಯ ಕಾವಲುಗಾರ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ.

ರಿಪಬ್ಲಿಕ್ ಟಿವಿಯ ಮೂರು ಮಂದಿಯಿದ್ದ ಕಾರನ್ನು ಅಲ್ಲಿನ ಬಂಗಲೆ ಎದುರು ಸೆಪ್ಟೆಂಬರ್ 8ರಂದು ರಾತ್ರಿ 8.30ಕ್ಕೆ   ನಿಲ್ಲಿಸಲಾಗಿತ್ತೆನ್ನಲಾಗಿದೆ. ಅಲ್ಲಿದ್ದ ಕಾವಲುಗಾರನ ಬಳಿ ಫಾರ್ಮ್ ಹೌಸ್‍ ಗೆ ಹೋಗುವ ದಾರಿ ಕೇಳಿದಾಗ ಆತ ಸರಿಯಾದ ಮಾಹಿತಿ ನೀಡದೆ ಪೊಲೀಸರಿಗೆ ತಿಳಿಸಿದ್ದ. ಕಾರಿನಲ್ಲಿದ್ದವರು ಸ್ವಲ್ಪ ಹೊತ್ತಿನಲ್ಲಿ ವಾಪಸ್ ಬಂದು ಕಾವಲುಗಾರನೊಂದಿಗೆ ತಕರಾರೆಬ್ಬಿಸಿದ್ದರೆನ್ನಲಾಗಿದೆ.

ಮೂರು ಮಂದಿಯ ವಿರುದ್ಧ ಸೆಕ್ಷನ್ 452, 448, 323, 504 ಹಾಗೂ 34 ಅನ್ವಯ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News