ಶಿವಾಜಿನಗರ: ಕಮರ್ಷಿಯಲ್ ಸ್ಟ್ರೀಟ್‍ನಲ್ಲಿ ಅಗ್ನಿ ಅವಘಡ

Update: 2020-09-09 16:04 GMT

ಬೆಂಗಳೂರು, ಸೆ.9: ಶಿವಾಜಿನಗರದ ಕಮರ್ಷಿಯಲ್ ಸ್ಟ್ರೀಟ್‍ನಲ್ಲಿ ಅಗ್ನಿಅವಘಡ ಸಂಭವಿಸಿದೆ. ಇಲ್ಲಿನ ಪ್ರಮುಖ ವಾಣಿಜ್ಯ ಕಟ್ಟಡ ಸಫೀನಾ ಪ್ಲಾಜಾ ಬಳಿಯ ಅಂಗಡಿಯಲ್ಲಿ ಬೆಂಕಿ ಹೊತ್ತಿ ಉರಿದಿದೆ.

ಬುಧವಾರ ಶಾರ್ಕ್ ಸಕ್ರ್ಯೂಟ್‍ನಿಂದಾಗಿ ಮುಂಜಾನೆ 6 ಗಂಟೆಗೆ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಟ್ಟಡದ ಮೊದಲನೆ ಮಹಡಿವರೆಗೂ ಬೆಂಕಿ ಸಂಪೂರ್ಣವಾಗಿ ಹಬ್ಬಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News