ಇಸ್ರೇಲ್-ಯುಎಇ ಶಾಂತಿ ಒಪ್ಪಂದಕ್ಕೆ ಸೆ. 15ರಂದು ಶ್ವೇತಭವನದಲ್ಲಿ ಸಹಿ

Update: 2020-09-09 17:27 GMT

ವಾಶಿಂಗ್ಟನ್, ಸೆ. 9: ತಮ್ಮ ನಡುವಿನ ಸಂಬಂಧವನ್ನು ಸಾಮಾನ್ಯ ಸ್ಥಿತಿಗೆ ತರುವ ಅಮೆರಿಕ ಮಧ್ಯಸ್ಥಿಕೆಯ ಶಾಂತಿ ಒಪ್ಪಂದಕ್ಕೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಇಸ್ರೇಲ್ ದೇಶಗಳು ಸೆಪ್ಟಂಬರ್ 15ರಂದು ಶ್ವೇತಭವನದಲ್ಲಿ ಸಹಿ ಹಾಕಲಿವೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಇದು ಕೊಲ್ಲಿ ದೇಶವೊಂದರ ಜೊತೆ ಇಸ್ರೇಲ್‌ನ ಇಂಥ ಮೊದಲ ಒಪ್ಪಂದವಾಗಿದೆ ಹಾಗೂ ಅರಬ್ ದೇಶವೊಂದರ ಜೊತೆಗಿನ ಮೂರನೇ ಒಪ್ಪಂದವಾಗಿದೆ. ಇದಕ್ಕೂ ಮೊದಲು ಇಸ್ರೇಲ್ ಈಜಿಪ್ಟ್ ಮತ್ತು ಜೋರ್ಡಾನ್ ಜೊತೆಗೆ ಒಪ್ಪಂದ ಮಾಡಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News