ಚೀನಾ ಸವಾಲು: ಭಾರತ, ಫ್ರಾನ್ಸ್, ಆಸ್ಟ್ರೇಲಿಯದಿಂದ ತ್ರಿಪಕ್ಷೀಯ ಮಾತುಕತೆ

Update: 2020-09-09 17:38 GMT

ಹೊಸದಿಲ್ಲಿ, ಸೆ. 9: ಭಾರತ-ಪೆಸಿಫಿಕ್ ಸಹಕಾರವನ್ನು ಹೆಚ್ಚಿಸುವುದಕ್ಕಾಗಿ ಭಾರತ, ಆಸ್ಟ್ರೇಲಿಯ ಮತ್ತು ಫ್ರಾನ್ಸ್ ದೇಶಗಳು ತ್ರಿಪಕ್ಷೀಯ ಚೌಕಟ್ಟಿನಡಿ ಬುಧವಾರ ಮೊದಲ ಬಾರಿಗೆ ಮತುಕತೆ ನಡೆಸಿದವು.

ಇತ್ತೀಚಿನ ದಿನಗಳಲ್ಲಿ ಭಾರತ-ಪೆಸಿಫಿಕ್ ವಲಯದಲ್ಲಿ ಚೀನಾದ ಅತಿಕ್ರಮಣ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ.

ಈ ಆನ್‌ಲೈನ್ ಸಭೆಯಲ್ಲಿ ಭಾರತದ ವಿದೇಶ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ, ಫ್ರಾನ್ಸ್ ವಿದೇಶ ಕಾರ್ಯದರ್ಶಿ ಫ್ರಾನೋಯಿಸ್ ಡೆಲಾಟರ್ ಮತ್ತು ಆಸ್ಟ್ರೇಲಿಯದ ವಿದೇಶ ಕಾರ್ಯದರ್ಶಿ ಫ್ರಾನ್ಸಸ್ ಆ್ಯಡಮ್ಸನ್ ಪಾಲ್ಗೊಂಡರು.

‘‘ಭಾರತ-ಪೆಸಿಫಿಕ್ ವಲಯದಲ್ಲಿ ಸಹಕಾರವನ್ನು ವೃದ್ಧಿಸುವುದು ಈ ಮಾತುಕತೆಯ ಉದ್ದೇಶವಾಗಿದೆ’’ ಎಂದು ವಿದೇಶ ವ್ಯವಹಾರಗಳ ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ. ಶಾಂತ, ಸುಭದ್ರ, ಸಮೃದ್ಧ ಹಾಗೂ ನಿಯಮಾಧಾರಿತ ಭಾರತ-ಪೆಸಿಫಿಕ್ ವಲಯದ ನಿರ್ಮಾಣಕ್ಕಾಗಿ ಈ ದೇಶಗಳ ಶಕ್ತಿಗಳನ್ನು ಹಾಗೂ ಪರಸ್ಪರ ಸಂಬಂಧಗಳನ್ನು ಬಳಸಿಕೊಳ್ಳುವ ಬಗ್ಗೆ ನಿರ್ಧರಿಸಲಾಯಿತು ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News