ಸಂಸತ್ ಅಧಿವೇಶನಕ್ಕೆ ಮುನ್ನಾ ದಿನದ ಸಾಂಪ್ರದಾಯಿಕ ಸರ್ವ ಪಕ್ಷ ಸಭೆ ರದ್ದು

Update: 2020-09-13 08:29 GMT

ಹೊಸದಿಲ್ಲಿ, ಸೆ.13: ಸಂಸತ್ ಅಧಿವೇಶನಕ್ಕೆ ಮುನ್ನಾದಿನ ನಡೆಯುವ ಸಾಂಪ್ರದಾಯಿಕ ಸರ್ವ ಪಕ್ಷ ಸಭೆಯನ್ನು ರದ್ದುಪಡಿಸಲಾಗಿದೆ. ಸಂಸತ್ತಿನ ಮುಂಗಾರು ಅಧಿವೇಶನವು ಸೋಮವಾರದಿಂದ ಆರಂಭವಾಗಲಿದೆ.

ಬಹುಶಃ ಎರಡು ದಶಕಗಳ ಬಳಿಕ ಮೊದಲ ಬಾರಿ ಈ ವಿದ್ಯಮಾನ ನಡೆದಿದೆ. ಇದು ವಿಪಕ್ಷಗಳು ಹಾಗೂ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ನಡುವೆ ಹೆಚ್ಚುತ್ತಿರುವ ವ್ಯತ್ಯಾಸಗಳ ಸೂಚನೆಯಾಗಿ ಕಂಡುಬಂದಿದೆ.

ಅಧಿವೇಶನದ ಕಾರ್ಯಸೂಚಿಯನ್ನು ಚರ್ಚಿಸಲು ಸ್ಪೀಕರ್ ಬಿರ್ಲಾ ಇಂದು ಬೆಳಗ್ಗೆ 11 ಗಂಟೆಗೆ ವ್ಯವಹಾರ ಸಲಹಾ ಸಮಿತಿಯ ಸಭೆ ಕರೆದಿದ್ದಾರೆ. ಅಧಿವೇಶನವು ಅಕ್ಟೋಬರ್ 1ರ ತನಕ ನಡೆಯಲಿದೆ.

ಇಂದಿನ ಸಭೆಯಲ್ಲಿ ಪ್ರಶ್ನೋತ್ತರ ಅವಧಿ ಹಾಗೂ ಶೂನ್ಯ ವೇಳೆಯ ಅವಧಿಯನ್ನು ರದ್ದುಪಡಿಸುವ ವಿಚಾರಗಳು ಪ್ರಸ್ತಾವವಾಗುವ ಸಾಧ್ಯತೆಯಿದೆ. ಪ್ರತಿಪಕ್ಷಗಳ ಸಂಸದರ ತೀವ್ರ ಅಸಮಾಧಾನಕ್ಕೆ ಕಾರಣವಾಗಿರುವ ಶೂನ್ಯ ವೇಳೆಯನ್ನು ಪುನರಾರಂಭಿಸದಿರುವ ತನ್ನ ದೃಢ ನಿಲುವಿಗೆ ಕೇಂದ್ರ ಸರಕಾರ ಬದ್ಧವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News