ಸೆ.21ರಂದು ಸರಕಾರಿ ವೈದ್ಯಾಧಿಕಾರಿಗಳ ಸಂಘದಿಂದ 'ಬೆಂಗಳೂರು ಚಲೋ'

Update: 2020-09-13 12:32 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಸೆ. 13: ಸರಕಾರಿ ವೈದ್ಯಾಧಿಕಾರಿಗಳ ಸಂಘದಿಂದ ಸೆ.21 ರಂದು ಬೆಂಗಳೂರು ಚಲೋ ಹಮ್ಮಿಕೊಳ್ಳಲು ಸರಕಾರಿ ವೈದ್ಯಾಧಿಕಾರಿಗಳ ಸಂಘದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೆ.15ರಿಂದ 21ರವರೆಗೆ ಸರಕಾರಿ ವೈದ್ಯರು ಹೋರಾಟ ನಡೆಸಲು ಸಜ್ಜಾಗಿದ್ದಾರೆ. ಆ ದಿನಗಳಲ್ಲಿ ಓಪಿಡಿ ಸೇವೆ ಬಂದ್ ಆಗಲಿದ್ದು, ಕೇವಲ ತುರ್ತು ಚಿಕಿತ್ಸೆ ಮಾತ್ರ ಜನರಿಗೆ ಲಭ್ಯ ಇರಲಿದೆ.

ಅಲ್ಲದೇ ಸೆ.15 ರಿಂದ 21ರವರೆಗೆ ಜನರಿಗೆ ಕೊರೋನ ವರದಿ ಸಿಗೋದಿಲ್ಲ. ಅಷ್ಟೇ ಅಲ್ಲದೆ ಡೆಂಗ್ಯೂ, ಚಿಕನ್ ಗುನ್ಯಾ, ಮಲೇರಿಯಾ, ಹೆಚ್1ಎನ್1 ಸಂಬಂಧದ ಯಾವ ರಿಪೋರ್ಟ್ ಕೂಡ ಸಿಗೋದಿಲ್ಲ. ಈ ಕುರಿತು ಸರಕಾರಕ್ಕೂ ಮಾಹಿತಿ ನೀಡದಿರಲು ತೀರ್ಮಾನಿಸಲಾಗಿದೆ.

ಪ್ರಮುಖ ಬೇಡಿಕೆಗಳು: ವೇತನ ತಾರತಮ್ಯ ಸರಿಪಡಿಸಬೇಕು, ಬೆಂಗಳೂರಿನ 48 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಿಬಿಎಂಪಿ ತೆಕ್ಕೆಯಿಂದ ಆರೋಗ್ಯ ಇಲಾಖೆಗೆ ಸೇರಿಸಬೇಕು. ಸರಕಾರದಿಂದ ವೈದ್ಯರ ದಿನಾಚರಣೆ ಆಚರಿಸಬೇಕು. ಜಿಲ್ಲಾಸ್ಪತ್ರೆಗಳನ್ನು ಮೆಡಿಕಲ್ ಕಾಲೇಜು ವ್ಯಾಪ್ತಿಗೆ ಸೇರಿಸಬಾರದು, ವೈದ್ಯರ ವಿರುದ್ಧ ಆರೋಪ ಬಂದಾಗ ತನಿಖೆಗೂ ಮುನ್ನ ಅಮಾನತು ಮಾಡಬಾರದು, ಕೊರೋನ ಕರ್ತವ್ಯ ವೇಳೆ ಮೃತಪಟ್ಟಿರುವ ವೈದ್ಯರಿಗೆ ಸರಕಾರದಿಂದ ಪರಿಹಾರ ಬಿಡುಗಡೆ ಮಾಡಬೇಕು ಎಂಬ ಬೇಡಿಕೆಗಳನ್ನು ಇಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News