ಅಮೆರಿಕಾದ ವಿದೇಶಿ ಏಜೆಂಟ್ ಕಾಯಿದೆಯಡಿ ನೋಂದಣಿ ಮಾಡಿಕೊಂಡ ಬಿಜೆಪಿಯ ಸಹಸಂಸ್ಥೆ

Update: 2020-09-14 07:53 GMT

ಹೊಸದಿಲ್ಲಿ: ಅಮೆರಿಕಾದಲ್ಲಿರುವ ಬಿಜೆಪಿ ಸಹ ಸಂಸ್ಥೆ ಓವರ್ ಸೀಸ್ ಫ್ರೆಂಡ್ಸ್ ಆಫ್ ಬಿಜೆಪಿ-ಯುಎಸ್‍ಎ (ಒಎಫ್‍ ಬಿಜೆಪಿ-ಯುಎಸ್‍ಎ) ಇತ್ತೀಚೆಗೆ ಅಮೆರಿಕಾದ  ನ್ಯಾಯ ಇಲಾಖೆಯಡಿಯಲ್ಲಿ ವಿದೇಶಿ ಏಜಂಟರುಗಳ ನೋಂದಣಿ ಕಾಯಿದೆ (ಎಫ್‍ಎಆರ್‍ಎ) 1938 ಇದರ ಅನ್ವಯ ನೋಂದಣಿ ಮಾಡಿಕೊಂಡಿದೆ. ಅಷ್ಟೇ ಅಲ್ಲದೆ ಓವರ್ ಸೀಸ್ ಫ್ರೆಂಡ್ಸ್ ಆಫ್ ಬಿಜೆಪಿ ಈ ನೋಂದಣಿಗಾಗಿ ಸಲ್ಲಿಸಿದ್ದ ಅರ್ಜಿಯಲ್ಲಿ ಬಿಜೆಪಿಯನ್ನು ‘ಫಾರಿನ್ ಪ್ರಿನ್ಸಿಪಲ್’ ಎಂದು ಉಲ್ಲೇಖಿಸಿದೆ.

ಈ ಕಾಯಿದೆಯನ್ವಯ ಫಾರಿನ್ ಪ್ರಿನ್ಸಿಪಾಲ್  ಪರವಾಗಿ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ವ್ಯಕ್ತಿಗಳು  ತಮ್ಮ ನಂಟುಗಳು ಹಾಗೂ ಚಟುವಟಿಕೆಗಳ ಕುರಿತಂತೆ ಫಾರಿನ್ ಪ್ರಿನ್ಸಿಪಾಲ್ ಪರವಾಗಿ ಮಾಹಿತಿ ನೀಡಬೇಕಿದೆ.

ಈ ನೋಂದಣಿಯಲ್ಲಿರುವ ಮಾಹಿತಿಯಂತೆ ಬಿಜೆಪಿಯ ವಿದೇಶಾಂಗ ವ್ಯವಹಾರಗಳ ಇಲಾಖೆಯ ಉಸ್ತುವಾರಿಯಾಗಿರುವ ವಿಜಯ್ ಚೌಥೈವಾಲ ಅವರ ಜತೆ ತಾನು ಕಾರ್ಯನಿರ್ವಹಿಸುತ್ತಿರುವುದಾಗಿಯೂ ಓವರ್‍ ಸೀಸ್ ಫ್ರೆಂಡ್ಸ್ ಆಫ್ ಬಿಜೆಪಿ ಹೇಳಿದೆ.

ಅಮೆರಿಕಾದ ಈ ಕಾಯಿದೆ 1938ರಿಂದಲೂ ಜಾರಿಯಲ್ಲಿರುವಾಗ ಓವರ್‍ ಸೀಸ್ ಫ್ರೆಂಡ್ಸ್ ಆಫ್ ಬಿಜೆಪಿ ಈಗೇಕೆ ನೋಂದಣಿ ಮಾಡಿಕೊಂಡಿದೆ ಎಂಬ ಕುರಿತು ಸ್ಪಷ್ಟತೆಯಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News