ವಾರಂಟ್ ಇಲ್ಲದೆ ಯಾರನ್ನು ಬೇಕಾದರೂ ಬಂಧಿಸಬಲ್ಲ ಭದ್ರತಾ ಪಡೆ ರಚಿಸಲು ಮುಂದಾದ ಆದಿತ್ಯನಾಥ್ ಸರಕಾರ

Update: 2020-09-14 09:20 GMT

ಲಕ್ನೋ: ವಾರಂಟ್ ಇಲ್ಲದೆ ಎಲ್ಲಿಯೂ ಶೋಧ ಕಾರ್ಯಾಚರಣೆ ನಡೆಸಿ ಯಾರನ್ನು ಬೇಕಾದರೂ ಬಂಧಿಸುವ ಅಧಿಕಾರ ಹೊಂದಿರುವ ಹಾಗೂ ಸಿಐಎಸ್‍ಎಫ್ ಹೊಂದಿರುವಂತಹುದೇ ಅಧಿಕಾರಗಳನ್ನು ಹೊಂದಲಿರುವ ಉತ್ತರ ಪ್ರದೇಶ ವಿಶೇಷ ಭದ್ರತಾ ಪಡೆ ಎಂಬ ವಿಶೇಷ ಪಡೆಯನ್ನು ಸ್ಥಾಪಿಸಲಾಗುವುದೆಂದು ರಾಜ್ಯ ಸರಕಾರ ತಿಳಿಸಿದೆ.

ಈ ವಿಶೇಷ ಪಡೆಗೆ ರಾಜ್ಯದ ನ್ಯಾಯಾಲಯಗಳು, ವಿಮಾನ ನಿಲ್ದಾಣಗಳು, ಆಡಳಿತಾತ್ಮಕ ಕಟ್ಟಡಗಳು, ಮೆಟ್ರೋ, ಬ್ಯಾಂಕುಗಳು ಹಾಗೂ ಇತರ ಸರಕಾರಿ ಕಚೇರಿಗಳ ರಕ್ಷಣೆಯ ಜವಾಬ್ದಾರಿ ಇರಲಿದೆ.

ಈ ಉತ್ತರ ಪ್ರದೇಶ ವಿಶೇಷ ಭದ್ರತಾ ಪಡೆಯ ಎಂಟು ಬೆಟಾಲಿಯನ್ ಗಳನ್ನು ಆರಂಭದಲ್ಲಿ ರಚಿಸಲಾಗುವುದು ಹಾಗೂ ಇದಕ್ಕೆ ರೂ 1,7407.06 ಕೋಟಿ ವೆಚ್ಚವಾಗಲಿದೆ ಎಂದು ರವಿವಾರ ತಡರಾತ್ರಿ ಸರಣಿ ಟ್ವೀಟ್‍ಗಳ ಮೂಲಕ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಅವನೀಶ್ ಅವಸ್ಥಿ ಮಾಹಿತಿ ನೀಡಿದ್ದಾರೆ.

ಇದು ಮುಖ್ಯಮಂತ್ರಿ ಆದಿತ್ಯನಾಥ್ ಅವರ ಕನಸಿನ ಯೋಜನೆ. ಆರಂಭಿಕವಾಗಿ ಇದಕ್ಕೆ ಸಿಬ್ಬಂದಿಯನ್ನು ಉತ್ತರ ಪ್ರದೇಶ ಪೊಲೀಸರ ವಿಶೇಷ ಘಟಕವಾದ ಪಿಎಸಿಯಿಂದ ಪಡೆದುಕೊಳ್ಳಲಾಗುವುದು. ಎಂದೂ ಅವರು ತಿಳಿಸಿದ್ದಾರೆ.

“ಈ ಪಡೆಯ ಯಾವುದೇ ಸದಸ್ಯ ಯಾವುದೇ ಮ್ಯಾಜಿಸ್ಟ್ರೇಟ್ ಅವರಿಂದ ಪೂರ್ವಾನುಮತಿಯಿಲ್ಲದೆ ಹಾಗೂ ಯಾವುದೇ ವಾರಂಟ್ ಇಲ್ಲದೆ ಯಾರನ್ನು ಬೇಕಾದರೂ ಬಂಧಿಸಬಹುದು. ಇದಕ್ಕಾಗಿ ಪ್ರತ್ಯೇಕ ಕಾನೂನುಗಳನ್ನೂ ರಚಿಸಲಾಗುವುದು'' ಎಂದು ಅವಸ್ಥಿ ತಮ್ಮ ಟ್ವೀಟ್‍ ನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News