2,000 ರೂ. ನೋಟು ಮುದ್ರಣಕ್ಕೆ ಮೋದಿ ಸಹಮತ ಹೊಂದಿರಲಿಲ್ಲ, ಆದರೆ ಇತರರ ಅಭಿಪ್ರಾಯವನ್ನು ಒಪ್ಪಿದರು

Update: 2020-09-17 09:17 GMT

ಹೊಸದಿಲ್ಲಿ: ಕೇಂದ್ರ ಸರಕಾರ 2016ರಲ್ಲಿ ನೋಟು ಅಮಾನ್ಯೀಕರಣ ನಡೆಸಿದ ಬೆನ್ನಿಗೆ ಹೊಸ ರೂ 2000 ನೋಟುಗಳ ಮುದ್ರಣದ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಸಹಮತ ಹೊಂದಿರಲಿಲ್ಲ. ಆದರೆ ಇತರರು ಈ ನಿಟ್ಟಿನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ 2000 ನೋಟು ಮುದ್ರಣಕ್ಕೆ ಸೂಚಿಸಿದ್ದರು ಎಂದು 2014 ಹಾಗೂ 2019ರ ನಡುವೆ ಪ್ರಧಾನಿಯ ಮುಖ್ಯ ಕಾರ್ಯದರ್ಶಿಯಾಗಿದ್ದ ನೃಪೇಂದ್ರ ಮಿಶ್ರಾ ಬಹಿರಂಗಪಡಿಸಿದ್ದಾರೆ ಎಂದು theprint.in ವರದಿ ಮಾಡಿದೆ.

ಪ್ರಧಾನಿಯ 70ನೇ ಹುಟ್ಟುಹಬ್ಬದ ಅಂಗವಾಗಿ ಟೈಮ್ಸ್ ಆಫ್ ಇಂಡಿಯಾದಲ್ಲಿ ಬರೆಯಲಾದ ಅಂಕಣದಲ್ಲಿ ಅವರು ಮೇಲಿನ ಮಾಹಿತಿಯನ್ನು ನೀಡಿದ್ದಾರಲ್ಲದೆ ಈ ಕ್ರಮದ ಸಂಪೂರ್ಣ ಹೊಣೆಯನ್ನೂ ಪ್ರಧಾನಿ ಹೊತ್ತುಕೊಂಡಿದ್ದರಲ್ಲದೆ ತಮ್ಮ ನಿರ್ಧಾರದ ಜತೆ ಸಹಮತ ವ್ಯಕ್ತಪಡಿಸದ ತಮ್ಮ ಸಲಹೆಗಾರರನ್ನು ಯಾವತ್ತೂ ದೂಷಿಸಿಲ್ಲ ಎಂದಿದ್ದಾರೆ.

“2016ರಲ್ಲಿ ಅಮಾನ್ಯೀಕರಣಕ್ಕೆ ಸಿದ್ಧತೆ ನಡೆಯುತ್ತಿದ್ದ ಸಂದರ್ಭ ರೂ 2,000ರ ಹೊಸ ನೋಟುಗಳ ಮುದ್ರಣವಾಗಬೇಕೆಂದು ಕೆಲವರು ಸಲಹೆ ನೀಡಿದಾಗ ಅದಕ್ಕೆ ಪ್ರಧಾನಿಯ ಸಹಮತವಿಲ್ಲದೇ ಇದ್ದರೂ ಈ ಹೆಚ್ಚು ಬೆಲೆಯ ನೋಟುಗಳನ್ನು ಕ್ಷಿಪ್ರವಾಗಿ ಮುದ್ರಿಸಿದಲ್ಲಿ ಆರ್ಥಿಕತೆಯಲ್ಲಿ ನಗದು ಲಭ್ಯ ಹೆಚ್ಚಾಗುತ್ತದೆ ಎಂಬ ಸಲಹೆಯನ್ನು ಮನ್ನಿಸಿ ಒಪ್ಪಿದ್ದರು'' ಎಂದು ನೃಪೇಂದ್ರ ಮಿಶ್ರಾ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News