ಪರಿತ್ಯಕ್ತ ಗೆಳತಿಯನ್ನು ಕೊಂದ ಭಾರತ ಮೂಲದ ವ್ಯಕ್ತಿಗೆ ಜೀವಾವಧಿ

Update: 2020-09-17 15:53 GMT

ಲಂಡನ್, ಸೆ. 17: ತನ್ನಿಂದ ದೂರವಾದ ಗೆಳತಿಯನ್ನು ಬರ್ಬರವಾಗಿ ಕೊಂದ ಭಾರತ ಮೂಲದ 23 ವರ್ಷದ ವ್ಯಕ್ತಿಯೊಬ್ಬನಿಗೆ ಬ್ರಿಟನ್ ‌ನ ನ್ಯಾಯಾಲಯವೊಂದು ಜೀವಾವಧಿ ಶಿಕ್ಷೆ ವಿಧಿಸಿದೆ.

ಜಿಗುಕುಮಾರ್ ಸೊರ್ತಿ ಮಾರ್ಚ್ ತಿಂಗಳಲ್ಲಿ 21 ವರ್ಷದ ಭವಿನಿ ಪ್ರವೀಣ್‌ರನ್ನು ಲೀಸೆಸ್ಟರ್‌ನಲ್ಲಿರುವ ಆಕೆಯ ಮನೆಯಲ್ಲಿ ಇರಿದು ಕೊಂದಿರುವುದು ನ್ಯಾಯಾಲಯದಲ್ಲಿ ಸಾಬೀತಾಗಿದೆ.

ಆತನಿಗೆ ಪರೋಲ್ (ಜಾಮೀನು) ನೀಡುವ ಬಗ್ಗೆ ಪರಿಶೀಲನೆ ನಡೆಸುವ ಮುನ್ನ ಕನಿಷ್ಠ 28 ವರ್ಷ ಜೈಲಿನಲ್ಲಿರಬೇಕು ಎಂದು ಲೀಸೆಸ್ಟರ್ ಕ್ರೌನ್ ನ್ಯಾಯಾಲಯದಲ್ಲಿ ಬುಧವಾರ ತೀರ್ಪು ಪ್ರಕಟಿಸಿದ ನ್ಯಾಯಾಧೀಶ ತಿಮೋತಿ ಸ್ಪೆನ್ಸರ್ ಹೇಳಿದರು.

 ಮದುವೆಯ ಪ್ರಸ್ತಾಪವನ್ನು ಭವಿನಿ ತಿರಸ್ಕರಿಸಿದಾಗ ನಾನು ಮೋಸಹೋಗಿರುವುದು ಅನುಭವಕ್ಕೆ ಬಂತು ಎಂದು ಈ ತಿಂಗಳಲ್ಲಿ ನಡೆದ ವಿಚಾರಣೆಯ ವೇಳೆ ಅವನು ನ್ಯಾಯಾಲಯದಲ್ಲಿ ಹೇಳಿದ್ದಾನೆ.

 ಮಾರ್ಚ್ 2ರಂದು ಮಧ್ಯಾಹ್ನ ಮಾಜಿ ಗೆಳತಿಯನ್ನು ಕೊಂದ ಬಳಿಕ ಜಿಗುಕುಮಾರ್ ಪೊಲೀಸರ ಎದುರು ಶರಣಾಗಿ ಕೊಲೆಯ ವಿವರಗಳನ್ನು ನೀಡಿದ್ದನು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News