ಕೃಷಿಗೆ ಸಂಬಂಧಿಸಿದ ಮೂರು ನೂತನ ಮಸೂದೆ ರೈತ ವಿರೋಧಿ: ಕೇಜ್ರಿವಾಲ್

Update: 2020-09-17 15:55 GMT

ಹೊಸದಿಲ್ಲಿ, ಸೆ. 17: ಕೃಷಿಗೆ ಸಂಬಂಧಿಸಿದ ಮೂರು ನೂತನ ಮಸೂದೆಗಳು ರೈತ ವಿರೋಧಿ ಎಂದು ಪ್ರತಿಪಾದಿಸಿರುವ ಆಪ್‌ನ ರಾಷ್ಟ್ರೀಯ ಸಂಚಾಲಕ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಕೇಂದ್ರ ಸರಕಾರ ಈ ಮಸೂದೆಗಳನ್ನು ಹಿಂದೆ ತೆಗೆಯಬೇಕು. ಇಲ್ಲದೇ ಇದ್ದ ಸಂಸತ್ತಿನಲ್ಲಿ ತನ್ನ ಪಕ್ಷ ಮಸೂದೆಯ ವಿರುದ್ಧ ಮತ ಚಲಾಯಿಸಲಿದೆ ಎಂದಿದ್ದಾರೆ.

 ‘ಸಂಸತ್ತಿನಲ್ಲಿ ಅಂಗೀಕರಿಸಿದ ಕೃಷಿ ಹಾಗೂ ರೈತರಿಗೆ ಸಂಬಂಧಿಸಿದ ಮೂರು ನೂತನ ಮಸೂದೆಗಳು ರೈತ ವಿರೋಧಿ. ದೇಶಾದ್ಯಂತದ ರೈತರು ಈ ಮೂರು ಮಸೂದೆಗಳನ್ನು ವಿರೋಧಿಸುತ್ತಿದ್ದಾರೆ. ಕೇಂದ್ರ ಸರಕಾರ ಈ ಮೂರು ಮಸೂದೆಗಳನ್ನು ಹಿಂದೆ ತೆಗೆಯಬೇಕು. ಆಪ್ ಸಂಸತ್ತಿನಲ್ಲಿ ಈ ಮಸೂದೆಯ ವಿರುದ್ಧ ಮತ ಚಲಾಯಿಸಲಿದೆ’’ ಎಂದು ಅರವಿಂದ ಕೇಜ್ರಿವಾಲ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News