ಕಾಮಗಾರಿಗಳ ಅಕ್ರಮದಲ್ಲಿ ಭಾಗಿಯಾದವರ ಅಮಾನತು: ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಪತ್ರ

Update: 2020-09-17 17:22 GMT

ಬೆಂಗಳೂರು, ಸೆ.17: ಬಿಬಿಎಂಪಿಯ ಮಲ್ಲೇಶ್ವರಂ, ಗಾಂಧಿನಗರ, ಆರ್.ಆರ್. ನಗರ ವಲಯದ ಕಾಮಗಾರಿಗಳ ಅಕ್ರಮದಲ್ಲಿ ಭಾಗಿಯಾದ ನಾಲ್ವರನ್ನು ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿ ಆಧರಿಸಿ ಪಾಲಿಕೆ ಸೇವೆಯಿಂದ ಬಿಡುಗಡೆಗೊಳಿಸಲಾಗಿತ್ತು. ಆದರೀಗ ಮತ್ತೆ ಅವರನ್ನು ಪಾಲಿಕೆ ಸೇವೆಗೆ ನೇಮಿಸಿಕೊಳ್ಳುವ ಬಗ್ಗೆ ಗೊಂದಲ ಉಂಟಾಗಿದ್ದು, ಸ್ಪಷ್ಟನೆ ಕೊಡುವಂತೆ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಪತ್ರ ಬರೆದಿದ್ದಾರೆ.

ನಾಲ್ವರು ಅಭಿಯಂತರರಾದ ಹರೀಶ್ ಕುಮಾರ್, ವಿ.ಮೋಹನ್, ಜೆ.ಆರ್.ಕುಮಾರ್, ರೇವಣ್ಣರನ್ನು ಪಾಲಿಕೆ ಸೇವೆಯಿಂದ ಬಿಡುಗಡೆಗೊಳಿಸಿದ ಮೇಲೆ ಮಾತೃ ಇಲಾಖೆಗೆ ವರದಿ ಮಾಡಿಕೊಳ್ಳದೆ ಪುನಃ ಪಾಲಿಕೆಯಲ್ಲಿ ಮುಂದುವರಿಸಲು ಕರ್ನಾಟಕ ಆಡಳಿತ ನ್ಯಾಯ ಮಂಡಳಿಯ ಮೊರೆ ಹೋಗಿದ್ದರು.

ಆದರೆ ಆ ಅರ್ಜಿಯನ್ನು ನ್ಯಾಯ ಮಂಡಳಿ ವಜಾಗೊಳಿಸಿದ್ದು, ಮತ್ತೆ ಪಾಲಿಕೆ ಸೇವೆಗೆ ನಿಯೋಜಿಸಿಕೊಳ್ಳಲು ಪಾಲಿಕೆಗೆ ಯಾವುದೇ ನಿರ್ದೇಶನ ಬಂದಿಲ್ಲ. ಹೀಗಾಗಿ ಸೇವೆಯಿಂದ ಬಿಡುಗಡೆ ಮಾಡಿದ 7-11-19ರಿಂದ ಯಾವ ಪ್ರಾಧಿಕಾರದಿಂದ ವೇತನ ಪಾವತಿಸಬೇಕೆಂದು ಸ್ಪಷ್ಟನೆ ನೀಡುವಂತೆ ಮನವಿ ಮಾಡಿದ್ದಾರೆ. ಅಲ್ಲದೆ ಪಾಲಿಕೆಯಲ್ಲಿ ಕರ್ತವ್ಯದ ಮೇಲೆ ತೆಗೆದುಕೊಳ್ಳುವ ಬಗ್ಗೆಯೂ ಸ್ಪಷ್ಟನೆ ಕೊಡುವಂತೆ ಮನವಿ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News