ಸೆ.21ರಿಂದ ಕ್ಲೋನ್ ರೈಲುಗಳ ಸಂಚಾರ ಆರಂಭ

Update: 2020-09-19 13:04 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಸೆ.19: ರೈಲ್ವೆ ಸಚಿವಾಲಯವು ಕೆಲವು ನಿರ್ದಿಷ್ಟ ಮಾರ್ಗಗಳಲ್ಲಿ ಪ್ರಯಾಣಿಕರ ಬೇಡಿಕೆಗಳನ್ನು ಪೂರೈಸಲು ಈಗಾಗಲೇ ಸಂಚರಿಸುತ್ತಿರುವ ರೈಲುಗಳ ಜೊತೆಗೆ ಕ್ಲೋನ್(ತದ್ರೂಪಿ) ರೈಲುಗಳನ್ನು ಆರಂಭಿಸಲಿದ್ದು, ಸೆ.21ಯಿಂದ ಕ್ಲೋನ್ ರೈಲುಗಳು ಸಂಚಾರ ನಡೆಸಲಿವೆ.

ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ-ದಾನಾಪುರ-ಕೆಎಸ್‍ಆರ್ ವಿಶೇಷ ಸಾಪ್ತಾಹಿಕ ರೈಲು: ರೈಲು ಸಂಖ್ಯೆ 06509 ಕೆಎಸ್‍ಆರ್ ಬೆಂಗಳೂರು-ದಾನಾಪುರ ಸಾಪ್ತಾಹಿಕ ವಿಶೇಷ ರೈಲು ಸೆ. 21ರಿಂದ ಪ್ರತಿ ಸೋಮವಾರ ಬೆಳಗ್ಗೆ 8 ಗಂಟೆಗೆ ಬೆಂಗಳೂರಿನಿಂದ ಹೊರಟು ಬುಧವಾರ ಬೆಳಗ್ಗೆ 8 ಗಂಟೆಗೆ ದಾನಾಪುರ ತಲುಪುತ್ತದೆ. ಮರಳಿ, ದಾನಪುರ-ಬೆಂಗಳೂರಿಗೆ ಸೆ.23 ರಿಂದ ಪ್ರತಿ ಬುಧವಾರ ಸಂಜೆ 6:10 ಗಂಟೆಗೆ ದಾನಾಪುರದಿಂದ ಹೊರಟು ಶುಕ್ರವಾರ ಸಂಜೆ 6:20ಕ್ಕೆ ಬೆಂಗಳೂರು ತಲುಪುತ್ತದೆ.

ಯಶವಂತಪುರ-ನಿಜಾಮುದ್ದೀನ್ ದ್ವಿಸಾಪ್ತಾಹಿಕ ರೈಲು: ಸೆ.23ರಿಂದ ಪ್ರತಿ ಬುಧವಾರ- ಶನಿವಾರ ಮಧ್ಯಾಹ್ನ 1:55 ಗಂಟೆಗೆ ಯಶವಂತಪುರದಿಂದ ಹೊರಟು ಶುಕ್ರವಾರ ಮತ್ತು ಸೋಮವಾರ ಮಧ್ಯಾಹ್ನ 1:20ಕ್ಕೆ ನಿಜಾಮುದ್ದೀನ್ ತಲುಪುತ್ತದೆ. ಮರಳಿ ನಿಜಾಮುದ್ದೀನ್- ಯಶವಂತಪುರ ವಿಶೇಷ ದ್ವಿಸಾಪ್ತಾಹಿಕ ರೈಲು 26 ರಿಂದ ಪ್ರತಿ ಶನಿವಾರ ಮತ್ತು ಮಂಗಳವಾರ ಬೆಳಿಗ್ಗೆ 7 ಗಂಟೆಗೆ ನಿಜಾಮುದ್ದೀನ್‍ನಿಂದ ಹೊರಟು ಸೋಮವಾರ ಮತ್ತು ಗುರುವಾರ ಬೆಳಗ್ಗೆ 4:20ಕ್ಕೆ ಯಶವಂತಪುರ ತಲುಪುತ್ತದೆ.

ವಾಸ್ಕೋಡಗಾಮ-ನಿಜಾಮುದ್ದೀನ್ ಸಾಪ್ತಾಹಿಕ ರೈಲು: ವಾಸ್ಕೋಡಗಾಮ-ನಿಜಾಮುದ್ದೀನ್ ಸಾಪ್ತಾಹಿಕ ವಿಶೇಷ ರೈಲು ಸೆ.25 ರಿಂದ ಪ್ರತಿ ಶುಕ್ರವಾರ ಮಧ್ಯಾಹ್ನ 12:30ಕ್ಕೆ ವಾಸ್ಕೋಡಗಾಮದಿಂದ ಹೊರಟು ರವಿವಾರ ಬೆಳಿಗ್ಗೆ 4:20 ಗಂಟೆಗೆ ನಿಜಾಮುದ್ದೀನ್ ತಲುಪುತ್ತದೆ. ಮರಳಿ, ನಿಜಾಮುದ್ದೀನ್-ವಾಸ್ಕೋಡಗಾಮ ಸಾಪ್ತಾಹಿಕ ಸೆ.27 ರಿಂದ ಪ್ರತಿ ರವಿವಾರ ಮಧ್ಯಾಹ್ನ 1 ಗಂಟೆಗೆ ಹೊರಟು ಮಂಗಳವಾರ ಬೆಳಗ್ಗೆ 4:45 ಗಂಟೆಗೆ ವಾಸ್ಕೋಡಗಾಮ ತಲುಪುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News