ಪತ್ರಕರ್ತ ರಾಜೀವ್ ಶರ್ಮಾ ಬಂಧನವನ್ನು ಖಂಡಿಸಿದ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ

Update: 2020-09-19 16:20 GMT

ಹೊಸದಿಲ್ಲಿ, ಸೆ. 19: ಅಧಿಕೃತ ಗೌಪ್ಯ ಕಾಯ್ದೆ ಅಡಿಯಲ್ಲಿ ಫ್ರಿಲ್ಯಾನ್ಸ್ ಪತ್ರಕರ್ತ ರಾಜೀವ್ ಶರ್ಮಾ ಅವರನ್ನು ಬಂಧಿಸಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ, ಪತ್ರಕರ್ತರನ್ನು ಆಯ್ದು ಪ್ರಕರಣದಲ್ಲಿ ಸಿಲುಕಿಸುವಲ್ಲಿ ದಿಲ್ಲಿ ಪೊಲೀಸರ ವಿಶೇಷ ಘಟಕದ ‘ಸಂಶಯಾಸ್ಪದ ಟ್ರ್ಯಾಕ್ ರೆಕಾರ್ಡ್’ ಹೊಂದಿರುವ ಬಗ್ಗೆ ಬೆಟ್ಟು ಮಾಡಿದೆ.

ದೀರ್ಘಕಾಲದಿಂದ ಕಾರ್ಯ ನಿರ್ವಹಿಸುತ್ತಿರುವ ಜನಪ್ರಿಯ ಫ್ರೀಲ್ಯಾನ್ಸ್ ಪತ್ರಕರ್ತ ಹಾಗೂ ಪ್ರೆಸ್ ಕ್ಲಬ್ ಇಂಡಿಯಾದ ಸದಸ್ಯ ರಾಜೀವ್ ಶರ್ಮಾ ಅವರ ಬಂಧನದ ಸುದ್ದಿ ಕೇಳಿ ನಾವು ಬೆರಗಾದೆವು ಎಂದು ಶನಿವಾರ ಹೇಳಿಕೆ ಬಿಡುಗಡೆ ಮಾಡಿದ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಹೇಳಿದೆ.

ಪೊಲೀಸರ ಕ್ರಮದ ಹಿಂದೆ ಪ್ರಭಾವಿಗಳ ಕೈವಾಡ ಇದೆ ಹಾಗೂ ಅಗೋಚರ ಅಥವಾ ಪ್ರಶ್ನಾರ್ಹ ಅಂಶಗಳಿಂದ ಪ್ರೇರಿತವಾಗಿರುವ ಸಾಧ್ಯತೆ ಎಂದು ಹೇಳಲು ಯಾವುದೇ ಹಿಂಜರಿಕೆ ಇಲ್ಲ ಎಂದು ಸಂಘಟನೆ ತಿಳಿಸಿದೆ. ವಿದೇಶಿ ಭದ್ರತಾ ಸಂಸ್ಥೆಗೆ ಕಾರ್ಯ ನಿರ್ವಹಿಸಿದ ಆರೋಪದಲ್ಲಿ ಪತ್ರಕರ್ತರನ್ನು ಬಂಧಿಸಿರುವ ಈ ಹಿಂದಿನ ಎರಡು ಪ್ರಕರಣಗಳನ್ನು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಉಲ್ಲೇಖಿಸಿದೆ ಹಾಗೂ ಎರಡೂ ಪ್ರಕರಣಗಳಲ್ಲಿ ಪೊಲೀಸರು ನಕಲಿ ಪ್ರಕರಣ ದಾಖಲಿಸಿರುವುದು ಅನಂತರ ಬೆಳಕಿಗೆ ಬಂತು ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News