ಡ್ರಗ್ಸ್ ಮಾರಾಟ ಆರೋಪ: ವಿದೇಶಿ ಪೆಡ್ಲರ್ ಗಳ ಬಂಧನ

Update: 2020-09-19 16:28 GMT

ಬೆಂಗಳೂರು, ಸೆ.19: ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪದಡಿ ನೈಜೀರಿಯಾದ ಇಬ್ಬರು ಪೆಡ್ಲರ್‍ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ನಾನಸೊ ಜೋಚಿನ್ (36) ಹಾಗೂ ತ್ರವೋರಿ ಬೆನ್ (25) ಬಂಧಿತ ಆರೋಪಿಗಳಾಗಿದ್ದು, ಇವರಿಂದ 10 ಲಕ್ಷ ಮೌಲ್ಯದ 25 ಎಲ್‍ಎಸ್‍ಡಿ ಸ್ಟ್ರಿಪ್ಸ್ ಹಾಗೂ 134 ಎಂಡಿಎಂಎ ಮಾತ್ರೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಸಿಬಿಯ ಜಂಟಿ ಆಯುಕ್ತ ಸಂದೀಪ್ ಪಾಟೀಲ ತಿಳಿಸಿದರು.

ಆರೋಗ್ಯ ಸಮಸ್ಯೆ ಅನ್ವಯ ವೀಸಾ ಪಡೆದು 2017ರಲ್ಲಿ ನಗರಕ್ಕೆ ಬಂದಿದ್ದ ಆರೋಪಿಗಳು, ಡ್ರಗ್ಸ್ ಮಾರಾಟದಲ್ಲಿ ತೊಡಗಿದ್ದರು. ಇವರ ವಿರುದ್ಧ ಕೆ.ಆರ್.ಪುರ ಹಾಗೂ ರಾಮಮೂರ್ತಿನಗರ ಠಾಣೆಯಲ್ಲೂ ಪ್ರಕರಣ ದಾಖಲಾಗಿತ್ತು. ಜೈಲಿಗೂ ಹೋಗಿ ಬಂದಿದ್ದ ಆರೋಪಿಗಳು, ಡ್ರಗ್ಸ್ ಮಾರಾಟ ಮುಂದುವರಿಸಿದ್ದರು ಎಂದು ಹೇಳಿದರು.

ಬಂಧಿತರ ವಿರುದ್ಧ ಎನ್‍ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ತಿಳಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News