ರಾಜಧಾನಿ ಬೆಂಗಳೂರಿನಲ್ಲಿ ಧಾರಾಕಾರ ಮಳೆ: ಜನಜೀವನ ಅಸ್ತವ್ಯಸ್ತ

Update: 2020-09-19 16:30 GMT

ಬೆಂಗಳೂರು, ಸೆ.19: ನಗರದ ಎಲ್ಲೆಡೆ ಶನಿವಾರ ಮಧ್ಯಾಹ್ನದಿಂದ ಸಂಜೆವರೆಗೂ ಧಾರಾಕಾರ ಮಳೆಯಾದ ಹಿನ್ನೆಲೆ ಅನೇಕ ರಸ್ತೆಗಳು ಜಲಾವೃತವಾಗಿದೆ.

ನಗರದಲ್ಲಿ ಶನಿವಾರ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವಾರಣ ಇತ್ತು. ಮಧ್ಯಾಹ್ನದ ನಂತರ ಪ್ರಾರಂಭವಾದ ಭಾರೀ ಮಳೆಯಿಂದ ಅಂಡರ್ ಪಾಸ್‍ಗಳಲ್ಲಿ ನೀರು ನಿಂತ ಹಿನ್ನೆಲೆ ವಾಹನ ಸವಾರರು ಕೆಲ ಸಮಯ ಪರದಾಡುವಂತಾಯಿತು.

ನಗರದ ಜಯನಗರ, ಯಶವಂತಪುರ, ಮೆಜಸ್ಟಿಕ್, ಕಾರ್ಪೋರೇಷನ್, ಬಸವನಗುಡಿ, ಗಾಂಧಿನಗರ, ಇಂದಿರಾ ನಗರ, ಕೋರಮಂಗಲ ಸೇರಿದಂತೆ ನಗರದ ಹಲವೆಡೆ ಭಾರೀ ಮಳೆಯಾಗುತ್ತಿದೆ. ಇದರಿಂದ ವಾಹನ ಸವಾರರು ಮಳೆಯಲ್ಲಿ ಸಿಲುಕಿ ಪರದಾಡುವಂತಾಗಿದೆ.

ಸದ್ಯ ನಗರದಲ್ಲಿ ಯಾವುದೇ ಮರಗಳು ಬಿದ್ದಿಲ್ಲ, ಮನೆಗಳಿಗೆ ನೀರು ನುಗ್ಗಿಲ್ಲ ಎಂದು ಬಿಬಿಎಂಪಿ ಕಂಟ್ರೋಲ್ ರೂಂ ಮಾಹಿತಿ ನೀಡಿದೆ.

ಆರ್.ಆರ್.ನಗರದಲ್ಲಿ 4.5 ಮೀ.ಮೀ ಹೆಚ್ಚು ಮಳೆಯಾಗಿದ್ದು, ಕೆಂಗೇರಿ 2 ಮೀ.ಮೀ, ರಾಜ ರಾಜೇಶ್ವರಿನಗರ -1ರಲ್ಲಿ 1.5 ಮೀ.ಮೀ, ರಾಮುಹಳ್ಳಿ 4 ಮೀ.ಮೀ, ಬೊಮ್ಮನಹಳ್ಳಿ 3 ಮೀ.ಮೀ, ಅಂಜನಪುರ 3 ಮೀ.ಮೀ ಹಾಗೂ ಹೆಮ್ಮಿಗೆಪುರ-4 ಮೀ.ಮೀ ಮಳೆ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News