ಅಮಾನತುಗೊಂಡಿರುವ ಸಂಸದರಿಗೆ ಬೆಂಬಲವಾಗಿ ಒಂದು ದಿನ ಉಪವಾಸ ಕುಳಿತ ಶರದ್ ಪವಾರ್

Update: 2020-09-22 08:00 GMT

ಹೊಸದಿಲ್ಲಿ,ಸೆ.22:ವಿವಾದಾತ್ಮಕ ಕೃಷಿ ಮಸೂದೆಗಳ ಮತದಾನದ ವೇಳೆ ಕೋಲಾಹಲ ಎಬ್ಬಿಸಿ ರುವುದಕ್ಕೆ ಅಮಾನತುಗೊಂಡಿರುವ ಎಂಟು ಸಂಸದರಿಗೆ ಬೆಂಬಲ ಸೂಚಿಸಿ ಒಂದು ದಿನ ಉಪವಾಸ ಕುಳಿತ್ತಿದ್ದೇನೆ ಎಂದು ಮಹಾರಾಷ್ಟ್ರದ ಹಿರಿಯ ನಾಯಕ ಶರದ್ ಪವಾರ್ ಇಂದು ಹೇಳಿದ್ದಾರೆ.

ಸಂಸದರ ವಿರುದ್ಧ ವಿಧಿಸಿರುವ ಅಮಾನತನ್ನು ಹಿಂಪಡೆಯುವ ತನಕ ರಾಜ್ಯಸಭೆಯ ಕಲಾಪದಲ್ಲಿ ಭಾಗವಹಿಸದೇ ಇರಲು ಕಾಂಗ್ರೆಸ್ ಹಾಗೂ ಇತರ ವಿಪಕ್ಷಗಳು ನಿರ್ಧರಿಸಿವೆ.

ಪ್ರತಿಭಟನ ನಿರತ ಸದಸ್ಯರಿಗೆ ಬೆಂಬಲವಾಗಿ ನಾನು ಇಂದು ಏನೂ ಸೇವಿಸಿಲ್ಲ ಎಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ(ಎನ್‌ಸಿಪಿ)ರಾಜ್ಯಸಭಾ ಸದಸ್ಯ ಪವಾರ್ ಸುದ್ದಿಗಾರರಿಗೆ ತಿಳಿಸಿದರು.

ರವಿವಾರ ವಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಧ್ವನಿಮತದಿಂದ ಎರಡು ಕೃಷಿ ಮಸೂದೆಗಳನ್ನು ಅಂಗೀಕರಿಸಲಾಗಿತ್ತು.

"ನಾನು ಈ ರೀತಿ ಮಸೂದೆಯನ್ನು ಅಂಗೀಕರಿಸುವುದನ್ನು ಈ ತನಕ ನೋಡಿಲ್ಲ. ಅವರು(ಸರಕಾರ)ಶೀಘ್ರದಲ್ಲೇ ಈ ಮಸೂದೆಗಳನ್ನು ರವಾನಿಸಲು ಬಯಸಿದ್ದರು.ಸದಸ್ಯರಿಗೆ ಮಸೂದೆಗಳ ಬಗ್ಗೆ ಪ್ರಶ್ನೆಗಳಿದ್ದವು. ಅವರು ಚರ್ಚೆಯನ್ನು ಬಯಸುವುದಿಲ್ಲ ಎಂದು ತೋರುತ್ತದೆ... ಸದಸ್ಯರಿಗೆ ಉತ್ತರ ಸಿಗದಿದ್ದಾಗ ಅವರು ಸದನದ ಬಾವಿಗೆ ಇಳಿದರು'' ಎಂದು ರಾಜ್ಯಸಭೆಯಲ್ಲಿ ವಿಪಕ್ಷಗಳ ಪ್ರತಿಭಟನೆಯನ್ನು ಪವಾರ್ ಸಮರ್ಥಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News