ಅಗತ್ಯ ವಸ್ತುಗಳ ಪಟ್ಟಿಯಿಂದ ಧಾನ್ಯಗಳು, ಬೇಳೆಕಾಳುಗಳು, ಖಾದ್ಯ ತೈಲಗಳು, ಈರುಳ್ಳಿ, ಆಲೂಗಡ್ಡೆ ಹೊರಕ್ಕೆ

Update: 2020-09-22 08:18 GMT

ಹೊಸದಿಲ್ಲಿ, ಸೆ.22: ಲೋಕಸಭೆಯಲ್ಲಿ ಸೆಪ್ಟಂಬರ್ 15 ರಂದು ಅಂಗೀಕರಿಸಿದ್ದ ಅಗತ್ಯ ಸರಕುಗಳ (ತಿದ್ದುಪಡಿ)ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಗಳವಾರ ಧ್ವನಿಮತದಿಂದ ಅಂಗೀಕರಿಸಲಾಯಿತು.

ಧಾನ್ಯಗಳು, ಬೇಳೆಕಾಳುಗಳು, ಎಣ್ಣೆಕಾಳುಗಳು, ಖಾದ್ಯ ತೈಲಗಳು,ಈರುಳ್ಳಿ ಹಾಗೂ ಆಲೂಗಡ್ಡೆಗಳನ್ನು ಅಗತ್ಯ ವಸ್ತುಗಳ ಪಟ್ಟಿಯಿಂದ ತೆಗೆದುಹಾಕುವ ಮಸೂದೆಯನ್ನು ಸಂಸತ್ತು ಮಂಗಳವಾರ ಅಂಗೀಕರಿಸಿತು.

ಮಸೂದೆಯು ಜೂನ್‌ನಲ್ಲಿ ಘೋಷಿಸಿದ ಸುಗ್ರೀವಾಜ್ಞೆಯನ್ನು ಬದಲಾಯಿಸುತ್ತದೆ. ಖಾಸಗಿ ಹೂಡಿಕೆದಾರರು ತಮ್ಮ ವ್ಯವಹಾರ ಕಾರ್ಯಾಚರಣೆಗಳಲ್ಲಿ ಅತಿಯಾದ ನಿಯಂತ್ರಕ ಹಸ್ತಕ್ಷೇಪದ ಭಯವನ್ನು ತೆಗೆದುಹಾಕುವ ಉದ್ದೇಶವನ್ನು ಈ ಮಸೂದೆಯು ಹೊಂದಿದೆ.

ಉತ್ಪಾದಿಸುವ, ಹಿಡಿದಿಡುವ, ಚಲಿಸುವ, ವಿತರಿಸುವ ಹಾಗೂ ಪೂರೈಸುವ ಸ್ವಾತಂತ್ರವು ಆರ್ಥಿಕತೆಯ ಪ್ರಮಾಣವನ್ನು ಸದುಪಯೋಗಪಡಿಸಿಕೊಳ್ಳಲು ಕಾರಣವಾಗುತ್ತದೆ ಹಾಗೂ ಖಾಸಗಿವಲಯ/ವಿದೇಶಿ ನೇರ ಹೂಡಿಕೆಯನ್ನು ಕೃಷಿಕ್ಷೇತ್ರಕ್ಕೆ ಆಕರ್ಷಿಸುತ್ತದೆ ಎಂದು ಸರಕಾರ ಈ ಹಿಂದೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News