ತನ್ನ ಶೈಕ್ಷಣಿಕ ಕ್ಯಾಲೆಂಡರ್ ಪರಿಷ್ಕರಿಸಿದ ಯುಜಿಸಿ: ಪ್ರಥಮ ವರ್ಷ ತರಗತಿಗಳು ನವೆಂಬರ್ ನಲ್ಲಿ ಆರಂಭ

Update: 2020-09-22 08:44 GMT

ಹೊಸದಿಲ್ಲಿ : ಕೋವಿಡ್-19 ಸಾಂಕ್ರಾಮಿಕವನ್ನು ಗಮನದಲ್ಲಿಟ್ಟುಕೊಂಡು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಪ್ರಥಮ ವರ್ಷದ ಕಾಲೇಜು ಮತ್ತು ವಿವಿ ವಿದ್ಯಾರ್ಥಿಗಳಿಗಾಗಿ ತನ್ನ ಶೈಕ್ಷಣಿಕ ಕ್ಯಾಲೆಂಡರ್ ಅನ್ನು ಮತ್ತೆ ಪರಿಷ್ಕರಿಸಿದ್ದು ಈ ಪರಿಷ್ಕೃತ ಕ್ಯಾಲೆಂಡರ್ ನಂತೆ ಪ್ರಥಮ ವರ್ಷದ ತರಗತಿಗಳು ಸೆಪ್ಟೆಂಬರ್ ಬದಲು ನವೆಂಬರ್ ತಿಂಗಳಲ್ಲಿ ಆರಂಭಗೊಳ್ಳಲಿವೆ. ಒಂದು ವೇಳೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ನವೆಂಬರ್ ತನಕ ಕಾಲೇಜು ಮರುಆರಂಭದ ಕುರಿತು ಯಾವುದೇ ನಿರ್ಧಾರ ಕೈಗೊಳ್ಳದೇ ಇದ್ದಲ್ಲಿ ನವೆಂಬರ್ ನಿಂದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿಗಳು ಆರಂಭಗೊಳ್ಳಲಿವೆ.

ಒಮ್ಮೆ ಸಾಮಾನ್ಯ ತರಗತಿಗಳು ಆರಂಭಗೊಂಡ ನಂತರ ವಾರದಲ್ಲಿ ಆರು ದಿನಗಳ ಕಾಲ ತರಗತಿಗಳನ್ನು ನಡೆಸಬೇಕು ಹಾಗೂ ಬೇಸಿಗೆ ಹಾಗೂ ಚಳಿಗಾಲದ ರಜೆಗಳು ಇರುವುದಿಲ್ಲ ಎಂದು ಯುಜಿಸಿ ಹೇಳಿದೆ. ನವೆಂಬರ್ 30ರೊಳಗಾಗಿ ಯಾವುದೇ ವಿದ್ಯಾರ್ಥಿ ತನ್ನ ಪ್ರವೇಶಾತಿ ವಾಪಸ್ ಪಡೆದರೆ ಪಾವತಿಸಿದ ಸಂಪೂರ್ಣ ಶುಲ್ಕ ವಾಪಸ್ ನೀಡಬೇಕೆಂದೂ ಕಾಲೇಜುಗಳಿಗೆ ಯುಜಿಸಿ ಸೂಚಿಸಿದೆ. ಪ್ರವೇಶಾತಿ ಪ್ರಕ್ರಿಯೆ ಅಕ್ಟೋಬರ್ 31ರೊಳಗೆ ಪೂರ್ಣಗೊಳ್ಳಬೇಕೆಂದೂ ಯುಜಿಸಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News