ಭಿವಂಡಿ ಕಟ್ಟಡ ಕುಸಿತ ಪ್ರಕರಣ: ಸಾವಿನ ಸಂಖ್ಯೆ 33ಕ್ಕೇರಿಕೆ

Update: 2020-09-23 07:14 GMT

ಥಾಣೆ: ಮಹಾರಾಷ್ಟ್ರದ ಭಿವಂಡಿ ಪ್ರದೇಶದಲ್ಲಿ ಇತ್ತೀಚೆಗೆ ಸಂಭವಿಸಿರುವ ಕಟ್ಟಡ ಕುಸಿತ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 33ಕ್ಕೇರಿಕೆಯಾಗಿದೆ. ಕಟ್ಟಡದ ಅವಶೇಷಗಳಡಿ ಸಿಲುಕಿದ್ದ ಎಂಟು ಮೃತದೇಹಗಳನ್ನು ಹೊರತೆಗೆಯಲಾಗಿದೆ.

ಸಾವನ್ನಪ್ಪಿದವರ ಪೈಕಿ ಮೂವರು ಮಕ್ಕಳು ಸೇರಿದಂತೆ 15 ವರ್ಷ ವಯಸ್ಸಿನ ಹದಿನೈದು ಮಕ್ಕಳು ಇದ್ದಾರೆ. ಸುರಿಯುವ ಮಳೆಯ ನಡುವೆಯೇ ಇಡೀ ರಾತ್ರಿ ರಕ್ಷಣಾ ಕಾರ್ಯ ಮುಂದುವರಿದಿದೆ. ಇಲ್ಲಿಯವರೆಗೂ ಕಟ್ಟಡದ ಅವಶೇಷಗಳಡಿಯಿಂದ 25 ಮಂದಿಯನ್ನು ರಕ್ಷಿಸಲಾಗಿದೆ. ಅವರನ್ನು ಭಿವಂಡಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಎರಡು ದಿನಗಳಿಂದ ಕಟ್ಟಡದ ಅವಶೇಷಗಳ ಅಡಿ ಸಿಲುಕಿಕೊಂಡಿದ್ದ ಮೃತದೇಹಗಳು ಕೊಳೆಯುವ ಹಂತದಲ್ಲಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

43 ವರ್ಷದಷ್ಟು ಹಳೆಯದಾಗಿರುವ ಮೂರು ಅಂತಸ್ತಿನ ಕಟ್ಟಡ ಸೋಮವಾರ ಮುಂಜಾನೆ 3:40ರ ಸುಮಾರಿಗೆ ಕುಸಿದುಬಿದ್ದಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News