ನಾನು ಮಾಸ್ಕ್ ಧರಿಸುವುದಿಲ್ಲ ಎಂದಿದ್ದ ಮಧ್ಯಪ್ರದೇಶದ ಗೃಹ ಸಚಿವರಿಂದ ವಿಷಾದ

Update: 2020-09-24 05:23 GMT

ಭೋಪಾಲ್, ಸೆ.24: ನಾನು ಮಾಸ್ಕ್ ಧರಿಸುವುದಿಲ್ಲ ಎಂದು ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ ಮಿಶ್ರಾ , ತನ್ನ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದರು.

"ಮಾಸ್ಕ್ ಧರಿಸಲಾರೆ ಎಂಬ ನನ್ನ ಹೇಳಿಕೆ ಕಾನೂನಿನ ಉಲ್ಲಂಘನೆಯಾಗಿದ್ದು, ಇದು ಪ್ರಧಾನಮಂತ್ರಿಯವರ ಭಾವನೆಯ ಪರವಾಗಿಲ್ಲ. ನನ್ನ ತಪ್ಪನ್ನು ಒಪ್ಪಿಕೊಳ್ಳುವೆ. ಇದಕ್ಕಾಗಿ ವಿಷಾದ ವ್ಯಕ್ತಪಡಿಸುವೆ. ನಾನು ಮಾಸ್ಕ್ ಧರಿಸುವೆ. ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು ಹಾಗೂ ಸುರಕ್ಷಿತ ಅಂತರ ಇರಿಸಿಕೊಳ್ಳಬೇಕು ಎಂದು ವಿನಂತಿಸುವೆ''ಎಂದು ಮಧ್ಯಪ್ರದೇಶದ ಗೃಹ ಸಚಿವ ಟ್ವೀಟಿಸಿದ್ದಾರೆ.

ನಾನು ಯಾವುದೇ ಕಾರ್ಯಕ್ರಮಕ್ಕೆ ಮಾಸ್ಕ್ ಧರಿಸುವುದಿಲ್ಲ. ಇದರಿಂದ ಏನಾಗುತ್ತದೆ ಎಂದು ಇಂದೋರ್ ನಡೆದಿದ್ದ ಕಾರ್ಯಕ್ರಮದಲ್ಲಿ ನೀವು ಮಾಸ್ಕ್ ಧರಿಸಿಲ್ಲ ಏಕೆ ಎಂದು ಸುದ್ದಿಗಾರರ ಪ್ರಶ್ನೆಗೆ 60ರ ವಯಸ್ಸಿನ ಬಿಜೆಪಿ ನಾಯಕ ಮಿಶ್ರಾ ಉತ್ತರಿಸಿದರು.

ಮಿಶ್ರಾ ಅವರ ಈ ಹೇಳಿಕೆಯನ್ನು ಪ್ರತಿಪಕ್ಷ ಕಾಂಗ್ರೆಸ್ ತೀವ್ರವಾಗಿ ಟೀಕಿಸಿತ್ತು.

ರಾಜ್ಯದ ಗೃಹ ಸಚಿವರು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಕ್ತ ಸವಾಲು ಒಡ್ಡುತ್ತಿದ್ದಾರೆ. ಮಿಶ್ರಾ ವಿರುದ್ದ ಕ್ರಮ ಕೈಗೊಳ್ಳುವ ಧೈರ್ಯ ಯಾರಿಗಾದರೂ ಇದೆಯೇ  ನಿಯಮಗಳು ಸಾಮಾನ್ಯ ಜನರಿಗೆ ಮಾತ್ರವೇ ಇರುವುದೇ ಎಂದು ಮಧ್ಯಪ್ರದೇಶದ ಕಾಂಗ್ರೆಸ್ ವಕ್ತಾರ ನರೇಂದ್ರ ಸಲುಜಾ ಟ್ವೀಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News