ರಫೇಲ್ ಯುದ್ಧ ವಿಮಾನ ಹಾರಾಟ ನಡೆಸಲಿರುವ ಪ್ರಥಮ ಮಹಿಳಾ ಪೈಲಟ್ ಶಿವಾಂಗಿ ಸಿಂಗ್

Update: 2020-09-24 09:11 GMT

ಹೊಸದಿಲ್ಲಿ : ಫ್ರಾನ್ಸ್ ನಿರ್ಮಿತ ರಫೇಲ್ ಯುದ್ಧ ವಿಮಾನದ ಪ್ರಥಮ ಮಹಿಳಾ ಪೈಲಟ್ ಆಗಲು ಫ್ಲೈಟ್ ಲೆಫ್ಟಿನೆಂಟ್ ಶಿವಾಂಗಿ  ಸಿಂಗ್ ಅವರು ಸಜ್ಜಾಗಿದ್ದಾರೆ. ಭಾರತೀಯ ವಾಯುಪಡೆಯ  ಹಲವು ಯುದ್ಧ ವಿಮಾನಗಳನ್ನು ಹಾರಾಟ ನಡೆಸಿದ ಅನುಭವವಿರುವ  ಶಿವಾಂಗಿ ಅವರು ವಾರಣಾಸಿ ಮೂಲದವರಾಗಿದ್ದಾರೆ.

ಸದ್ಯ ಮಿಗ್-21 ಬೈಸನ್ ಯುದ್ಧ ವಿಮಾನಗಳನ್ನು ಹಾರಾಟ ನಡೆಸುತ್ತಿರುವ ಶಿವಾಂಗಿ ಸಿಂಗ್ ಅವರು ತಮ್ಮ `ಕನ್ವರ್ಶನ್ ತರಬೇತಿ' ಪೂರ್ಣಗೊಂಡ ನಂತರ  17 'ಗೋಲ್ಡನ್ ಆರೋಸ್' ಸ್ಜ್ವಾಡ್ರನ್ ಅನ್ನು ಅಂಬಾಲ ವಾಯು ನೆಲೆಯಲ್ಲಿ ಸೇರಲಿದ್ದಾರೆ.

ಬನಾರಸ್ ಹಿಂದು ವಿವಿಯಿಂದ ಪದವಿ ಪಡೆದಿರುವ ಫ್ಲೈಟ್ ಲೆಫ್ಟಿನೆಂಟ್ ಶಿವಾಂಗಿ  ಅವರು  2017ರಲ್ಲಿ ಸೇರ್ಪಡೆಗೊಂಡ ಎರಡನೇ ಬ್ಯಾಚಿನ ಮಹಿಳಾ ಯುದ್ಧವಿಮಾನ ಪೈಲಟ್ ಗಳಲ್ಲಿ ಒಬ್ಬರಾಗಿದ್ದರು.  ಭಾರತೀಯ ವಾಯುಪಡೆಯಲ್ಲಿ ಸದ್ಯ 10 ಯುದ್ಧ ವಿಮಾನ ಹಾರಾಟ ನಡೆಸುವ ಮಹಿಳಾ ಪೈಲಟ್‍ಗಳಿದ್ದು ಅವರೆಲ್ಲರೂ ಸೂಪರ್ ಸಾನಿಕ್ ವಿಮಾನಗಳ ಹಾರಾಟಕ್ಕೆ ಕಠಿಣ ತರಬೇತಿ ಪಡೆದಿದ್ದಾರೆ. ಒಬ್ಬ ಯುದ್ಧವಿಮಾನ ಪೈಲಟ್ ತರಬೇತಿಗೆ ರೂ 15 ಕೋಟಿ ಖರ್ಚು ತಗಲುತ್ತದೆ.

ಫ್ಲೈಟ್  ಲೆಫ್ಟಿನೆಂಟ್ ಶಿವಾಂಗಿ  ಸಿಂಗ್ ಅವರು ಈ ಹಿಂದೆ ರಾಜಸ್ಥಾನ ವಾಯು ನೆಲೆಯಲ್ಲಿ ನಿಯೋಜನೆಗೊಂಡಿದ್ದರಲ್ಲದೆ ಬಾಲಾಕೋಟ್ ವಾಯು ದಾಳಿಯ ನಂತರ ಪಾಕಿಸ್ತಾನ ತನ್ನ ವಶಕ್ಕೆ ಪಡೆದುಕೊಂಡಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಜತೆಗೂ  ಯುದ್ಧ ವಿಮಾನ ಹಾರಾಟ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News