ವಿವಿ ಕಟ್ಟಡ ಸ್ಥಾಪನೆಗೆ ಅರಣ್ಯ ಭೂಮಿ ಬಳಸದಂತೆ ಒತ್ತಾಯಿಸಿ ಜಾಥಾ

Update: 2020-09-27 17:03 GMT

ಬೆಂಗಳೂರು, ಸೆ.27: ಬೆಂವಿವಿಯ ನೂರಾರು ಎಕರೆ ಭೂಮಿಯಲ್ಲಿ ಯೋಗ ಹಾಗೂ ಗುಲ್ಬರ್ಗ ವಿಶ್ವವಿದ್ಯಾಲಯದ ಕಟ್ಟಡ ನಿರ್ಮಾಣ ಮಾಡಲು ಬಳಸಬಾರದೆಂದು ಡಾ.ರೇಣುಕಾ ಪ್ರಸಾದ್ ನೇತೃತ್ವದಲ್ಲಿ ಕಾಲ್ನಡಿಗೆ ಜಾಥಾವನ್ನು ಹಮ್ಮಿಕೊಂಡಿದ್ದರು.

ಬೆಂಗಳೂರು ವಿವಿಯ ಆಡಳಿತ ಭವನದಿಂದ ಉಪಕುಲಪತಿಗಳ ನಿವಾಸದವರೆಗೂ ಕಾಲ್ನಡಿಗೆಯಲ್ಲಿ ತೆರಳಿ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಡಾ.ರೇಣುಕಾ ಪ್ರಸಾದ್ ಅವರು, ಬೆಂವಿವಿ ಆವರಣದಲ್ಲಿ ಗಿಡಮರಗಳು, ಪಕ್ಷಿ, ಪ್ರಾಣಿಗಳು ವಾಸಿಸುತ್ತಿವೆ. ಈ ಜಾಗವನ್ನು ಈಗಾಗಲೇ ಜೀವವೈವಿಧ್ಯತೆ ಉದ್ಯಾನವನವಾಗಿ ಘೋಷಿಸಿದ ಇಲಾಖೆ ಈಗ ವಿವಿಧ ಸಂಸ್ಥೆಗಳ ಕಟ್ಟಡಗಳ ಕಟ್ಟುವ ಉದ್ದೇಶದಿಂದ ಅರಣ್ಯನಾಶಕ್ಕೆ ಮುಂದಾಗಿರುವುದು ಪರಿಸರ ಪ್ರೇಮಿಗಳಲ್ಲಿ ಆಕ್ರೋಶ ಉಂಟುಮಾಡಿದೆ ಎಂದರು.

ಅನೇಕ ಪ್ರಾಣಿ ಮತ್ತು ಪಕ್ಷಿ ಸಂಕುಲಕ್ಕೆ ಆಶ್ರಯ ತಾಣವಾಗಿರುವ ಅಮೂಲ್ಯವಾದ ಅರಣ್ಯ ಸಂಪತ್ತಿನ ಹಸಿರನ್ನು ಉಳಿಸಿ ಪೋಷಿಸಬೇಕೆನ್ನುವ ಸ್ವಾರ್ಥರಹಿತ ಸದುದ್ದೇಶವಾಗಿದೆ ಎಂದು ನುಡಿದರು.

ಸರಕಾರಗಳು ಅಭಿವೃದ್ಧಿಯ ಹೆಸರಿನಲ್ಲಿ ಪರಿಸರವನ್ನು ಹಾಳು ಮಾಡಲು ಹೋರಟಿವೆ. ವಿವಿ ಆವರಣದಲ್ಲಿ ಅನೇಕ ಸಂಸ್ಥೆಗಳಿಗೆ ಜಾಗ ಮಂಜೂರು ಮಾಡಿ ಕಾಂಕ್ರೀಟ್ ಕಾಡನ್ನಾಗಿ ಮಾಡಲು ಹೊರಟಿರುವ ವ್ಯವಸ್ಥೆಯ ತೀರ್ಮಾನದ ವಿರುದ್ಧ ಜಾಗೃತಿ ಮೂಡಿಸಿ ವಿವಿಯ ಕಾಡನ್ನು ಉಳಿಸಿಕೊಳ್ಳುವ ಅಭಿಯಾನವನ್ನು ಪರಿಸರ ಪ್ರೇಮಿಗಳಿಂದ ಇಂದು ನಡೆದಿದೆ. ಇಂತಹ ಯೋಜನೆಗಳನ್ನು ಇಲ್ಲಿಗೇ ಕೈಬಿಡದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಹೋರಾಟ ನಡೆಸಲು ನಾವು ಸಿದ್ಧ ಎಂದು ಎಚ್ಚರಿಕೆ ನೀಡಿದ್ದಾರೆ. ಪರಿಸರ ಪ್ರೇಮಿಗಳು, ಜ್ಞಾನ ಭಾರತಿ ವಾಯುವಿಹಾರಿಗಳ ಸಂಘ, ವಿವಿಯ ಸುತ್ತಮುತ್ತಲಿನ ನಿವಾಸಿಗಳು ಜಾಥದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News