ಕರ್ನಾಟಕ ಬಂದ್: ರಾಜಧಾನಿಯಲ್ಲಿ ಹೆಚ್ಚಿದ ಪ್ರತಿಭಟನೆಯ ಕಾವು; ಹಲವು ಪ್ರತಿಭಟನಾಕಾರರು ವಶಕ್ಕೆ

Update: 2020-09-28 05:19 GMT

ಬೆಂಗಳೂರು, ಸೆ.28: ‌ಕೇಂದ್ರ ಮತ್ತು ರಾಜ್ಯ ಸರಕಾರದ ಭೂಸುಧಾರಣೆ, ಎಪಿಎಂಸಿ ಸೇರಿದಂತೆ ಇನ್ನಿತರ ಸುಗ್ರೀವಾಜ್ಞೆ ಗಳನ್ನು ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್​ಗೆ ಪೂರಕವಾಗಿ ಪ್ರತಿಭಟನೆಯ ಕಾವು ರಾಜಧಾನಿ ಬೆಂಗಳೂರಿನಲ್ಲಿ ಏರುತ್ತಿದೆ.

ಮತ್ತೊಂದೆಡೆ ಹಲವು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಲ್ಲಿನ ನಾಯಂಡಳ್ಳಿ ಸರ್ಕಲ್ ನಲ್ಲಿ ಕರ್ನಾಟಕ ಜನಶಕ್ತಿ ಕುಮಾರ್ ಸಮತಳ, ಮರಿಯಪ್ಪ, ಸರೋವರ್ ಬೆಂಕಿಕೇರೆ, ಶ್ರೀನಿವಾಸ, ವರದರಾಜ್ ಇನ್ನಿತರರನ್ನು ಬಂಧಿಸಿದ್ದಾರೆ.

ಅದೇ ರೀತಿ, ಕೆಆರ್ ಪುರಂ ನಲ್ಲೂ ಕೆಲವರನ್ನು ಬಂಧಿಸಲಾಗಿದೆ. ಇನ್ನೂ, ಹಲವೆಡೆ ಸಂಘಟನೆಗಳು ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡುತ್ತಿವೆ. ಇದರಿಂದ ನಗರದಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿದೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಭದ್ರತೆ ಎಲ್ಲೆಡೆ ಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News