ಕೊರೋನ ಅಂತ್ಯಕ್ಕೆ ಸ್ಪಷ್ಟತೆಯಿಲ್ಲ, ಆರ್ಥಿಕತೆಗೆ ವಿಭಿನ್ನ ಸವಾಲು: ನಿರ್ಮಲಾ ಸೀತಾರಾಮನ್

Update: 2020-09-28 06:29 GMT

ಹೊಸದಿಲ್ಲಿ, ಸೆ.28: ಕೊರೋನ ವೈರಸ್ ನಿಯಂತ್ರಿಸಲು ದೇಶಾದ್ಯಂತ ಆರು ತಿಂಗಳು ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿಗೆ ತಂದ ಕಾರಣ ಎಪ್ರಿಲ್-ಜೂನ್ ತಿಂಗಳಲ್ಲಿ ಜಿಡಿಪಿ ಶೇ.23.9ರಷ್ಟು ಕುಸಿದಿದೆ. ಸಾಂಕ್ರಾಮಿಕ ರೋಗದ ಅಂತ್ಯಕ್ಕೆ ಸ್ಪಷ್ಟವಾದ ದಿನಾಂಕವಿಲ್ಲದೆಯೇ,ಅದಕ್ಕೆ ಖಚಿತವಾದ ಲಸಿಕೆಯೂ ದೊರೆಯದ ಕಾರಣ ಆರ್ಥಿಕತೆಯು ವಿಭಿನ್ನ ಸ್ವರೂಪದ ಸವಾಲುಗಳನ್ನು ಎದುರಿಸುತ್ತಿದೆ ಎಂದು 'indianexpress.com' ನೀಡಿದ ಸಂದರ್ಶನದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟಿದ್ದಾರೆ.

ಆರು ತಿಂಗಳು ನಿಜವಾಗಿಯೂ ಸವಾಲುಗಳನ್ನು ಕಡಿಮೆ ಮಾಡಿಲ್ಲ. ಆದರೆ ಸವಾಲುಗಳ ಸ್ವರೂಪ ಬದಲಾಗಿದೆ...ಹಾಗೂ ಸಚಿವಾಲಯವು ಈಗ ಇದ್ದದ್ದಕ್ಕಿಂತ ತ್ವರಿತವಾಗಿ ಪ್ರತಿಕ್ರಿಯಿಸುತ್ತಿದೆ. ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಹಾಗೂ ಎಚ್ಚರಿಕೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ದೇಶದ ಜನಸಂಖ್ಯೆಗೆ ಹೋಲಿಸಿದರೆ ಸೋಂಕಿತರ ಪ್ರಮಾಣ ಹಾಗೂ ಸಾವಿನ ಪ್ರಮಾಣ ಕಡಿಮೆ ಇದ್ದರೂ ಕೋವಿಡ್-19 ಚಿಂತೆಗೀಡು ಮಾಡಿದೆ ಎಂದರು.
ನಿಮಗೆ ಖಚಿತವಾದ ಲಸಿಕೆ ಇಲ್ಲ. ನಿಮಗೆ ಸ್ಪಷ್ಟವಾದ ಅಂತಿಮ ದಿನಾಂಕವಿಲ್ಲ ಹಾಗೂ ಕೆಲವು ಸ್ಥಳಗಳಲ್ಲಿ ಜನರು ಗುಣಮುಖರಾಗಿ ಮರಳುತ್ತಿದ್ದಾರೆ. ಸಣ್ಣ ಹಾಗೂ ಮಧ್ಯಮ ಉದ್ಯಮಿಗಳ ಮನಸ್ಸಿನಲ್ಲಿ ದೊಡ್ಡ ಅನಿಶ್ಚಿತತೆಗಳು ಕಾಡುತ್ತಿವೆ ಎಂದು ಸೀತಾರಾಮನ್ ಹೇಳಿದರು.

ಕೊರೋನ ಆರ್ಥಿಕ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮಬೀರಿದೆ. ವಿಶೇಷವಾಗಿ ಸೇವಾ ವಲಯ, ಇದು ಜಿಡಿಪಿಯ ಶೇ.50ರಷ್ಟಿದೆ. ಉತ್ಪಾದನಾ ವಲಯಗಳು ನಿಧಾನವಾಗಿ ಕೈಗಾರಿಕೆಗಳ ಸಾಮರ್ಥ್ಯದೊಂದಿಗೆ ಕೋವಿಡ್-19 ಪೂರ್ವ ಮಟ್ಟಕ್ಕೆ ಮರಳುತ್ತಿವೆ. ಕಾರ್ಮಿಕರ ಅಗತ್ಯವಿರುವ ಗಾರ್ಮೆಂಟ್ಸ್ ಹಾಗೂ ಸಿದ್ಧ ಉಡುಪುಗಳ ಕಾರ್ಖಾನೆಗಳಿಗೆ ವಲಸೆ ಕಾರ್ಮಿಕರು ಮರಳುತ್ತಿದ್ದಾರೆ.ಕೆಲವು ಕ್ಷೇತ್ರಗಳಲ್ಲಿ ರಫ್ತು ಸಹ ನಡೆಯುತ್ತಿದೆ. ಸಾಗರೋತ್ತರ ಬೇಡಿಕೆಯು ದೇಶೀಯ ಬೇಡಿಕೆಗಿಂತ ಹೆಚ್ಚಾಗುತ್ತಿದೆ. ಇದು ಸಚಿವಾಲಯದ ಸ್ವಂತ ಸಂಶೋಧನೆಗಳೊಂದಿಗೆ ಹೊಂದಿಕೆಯಾಗುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News